ಬುಧವಾರ, ಮೇ 18, 2022
27 °C

ಪಾಕಿಸ್ತಾನದ ಶೇ 34 ಜನರಿಗೆ ದಿನಕ್ಕೆ 588 ರೂಪಾಯಿ ಆದಾಯ: ವಿಶ್ವಬ್ಯಾಂಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್: ಪಾಕಿಸ್ತಾನದ ಒಟ್ಟಾರೆ ಜನಸಂಖ್ಯೆ ಪೈಕಿ ಶೇ 34ರಷ್ಟು ಜನರು ದಿನಕ್ಕೆ ಕೇವಲ 588 ರೂಪಾಯಿ (3.2 ಅಮೆರಿಕ ಡಾಲರ್)  ಆದಾಯದಲ್ಲಿ ಜೀವಿಸುತ್ತಿದ್ದಾರೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಪಾಕಿಸ್ತಾನದ ನೂತನ ವಿತ್ತ ಸಚಿವ ಮಿಫ್ತಾಹ್ ಇಸ್ಮಾಯಿಲ್ ಅವರ ಎದುರು ಹೆಚ್ಚುತ್ತಿರುವ ಹಣದುಬ್ಬರ ಸೇರಿದಂತೆ ಹಲವು ಸವಾಲುಗಳು ಇವೆ. 

ಭಾರಿ ಪ್ರಮಾಣದಲ್ಲಿ ಹಣದುಬ್ಬರದ ಏರಿಕೆಯಿಂದಾಗಿ ಬಡವರು ಮತ್ತು ಬಡತನಕ್ಕಿಂತ ಕೆಳಗಿರುವ ವರ್ಗದವರು ತಮ್ಮ ಒಟ್ಟಾರೆ ಬಜೆಟ್‌ನ ಹೆಚ್ಚು ಹಣವನ್ನು ಆಹಾರ ಮತ್ತು ಇಂಧನಕ್ಕಾಗಿ ಬಳಸುತ್ತಿದ್ದಾರೆ. ಬಡವರು ತಮ್ಮ ಆದಾಯದ ಶೇ 50ರಷ್ಟು ಹಣವನ್ನು ಆಹಾರ ಪದಾರ್ಥಗಳಿಗಾಗಿಯೇ ವಿನಿಯೋಗಿಸುತ್ತಿದ್ದಾರೆ ಎಂಬ ಅಂಶ ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು