ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ಶಿಯಾ ಮುಸ್ಲಿಮರ ಗುರಿಯಾಗಿಸಿ ಬಾಂಬ್ ದಾಳಿ ಹೊಣೆ ಹೊತ್ತ ಐಎಸ್-ಕೆ

Last Updated 22 ಏಪ್ರಿಲ್ 2022, 13:29 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಅಲ್ಪಸಂಖ್ಯಾತ 'ಶಿಯಾ ಮುಸ್ಲಿಂ' ಸಮುದಾಯವನ್ನು ಗುರಿಯಾಗಿಸಿ ಗುರುವಾರ ನಡೆದ ಸರಣಿ ಬಾಂಬ್‌ಗಳ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್–ಖೊರಾಸನ್ (ಐಎಸ್–ಕೆ) ಸಂಘಟನೆ ಹೊತ್ತುಕೊಂಡಿದೆ.

ಗುರುವಾರ ಅಫ್ಗಾನಿಸ್ತಾನದ ಶಿಯಾ ಸಮುದಾಯದವರ ಮಸೀದಿಯಲ್ಲಿ ಮೂರು ಬಾಂಬ್‌ಗಳು ಸ್ಫೋಟಗೊಂಡು, ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.ದಷ್ತ್–ಎ–ಬಾರ್ಚಿ ಎಂಬ ಪ್ರದೇಶದಲ್ಲಿನ ಪ್ರೌಢಶಾಲೆ ಬಳಿಯೂ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಇಬ್ಬರು ಬಾಲಕರು ಗಾಯಗೊಂಡಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ತಾಲಿಬಾನ್ ಸರ್ಕಾರ, ಐಎಸ್-ಕೆ ಉಗ್ರರಿಂದ ಭಾರಿ ಪ್ರತಿರೋಧ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT