ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ತೆರವು ಕಾರ್ಯಾಚರಣೆ ಚುರುಕು; ಮತ್ತೊಂದು ದಾಳಿಯ ಭೀತಿ

Last Updated 28 ಆಗಸ್ಟ್ 2021, 9:07 IST
ಅಕ್ಷರ ಗಾತ್ರ

ಕಾಬೂಲ್‌: ಅಮೆರಿಕ ನೇತೃತ್ವದ ತೆರವು ಕಾರ್ಯಾಚರಣೆಯ ಗಡುವು ಹತ್ತಿರ ಬರುತ್ತಿದ್ದಂತೆ ಅಫ್ಗಾನಿಸ್ತಾನದಲ್ಲಿ ಮತ್ತೊಂದು ದಾಳಿಯ ಅಪಾಯವೂ ಹೆಚ್ಚಿದೆ. ದಾಳಿಯ ಭೀತಿ ಮತ್ತು ಬಿಗಿ ಭದ್ರತೆಯ ನಡುವೆ ಅಮೆರಿಕವು ತನ್ನ ತೆರವು ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದೆ.

‘ಈ ನಡುವೆ ಆತ್ಮಾಹುತಿ ದಾಳಿ ನಡೆಸಿದ ಸಂಘಟನೆಯ ಸದಸ್ಯನೊಬ್ಬನನ್ನು ಹತ್ಯೆಮಾಡಿರುವುದಾಗಿ ಅಮೆರಿಕವು ಪ್ರತಿಪಾದಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೂರ್ವ ಅಫ್ಗಾನಿಸ್ತಾನದಲ್ಲಿ ಶನಿವಾರ ಬೆಳಿಗ್ಗೆ ಅಮೆರಿಕ ಸೇನೆಯು ಡ್ರೋನ್‌ ದಾಳಿ ನಡೆಸಿ, ಇಸ್ಲಾಮಿಕ್‌ ಸ್ಟೇಟ್‌ನ ಅಫ್ಗನ್‌ ಘಟಕದ ಸದಸ್ಯನೊಬ್ಬನನ್ನು ಕೊಂದಿದೆ’ ಎಂದು ಅಮೆರಿಕದ ಕೇಂದ್ರ ಕಮಾಂಡರ್‌ ತಿಳಿಸಿದ್ದಾರೆ.

ಕಾಬೂಲ್‌ನಲ್ಲಿ ಗುರುವಾರ ನಡೆದ ಆತ್ಮಾಹುತಿ ದಾಳಿಯನ್ನು ಇಸ್ಲಾಮಿಕ್‌ ಸ್ಟೇಟ್‌ ನಡೆಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ದೂರಿದ್ದರು.

ಸತ್ತವರ ಸಂಖ್ಯೆಯಲ್ಲಿ ಏರಿಕೆ: ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮೃತಪಟ್ಟ ಅಫ್ಗನ್ನರ ಸಂಖ್ಯೆ 169ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದಲ್ಲದೆ ಈ ದಾಳಿಯಲ್ಲಿ ಅಮೆರಿಕ ಸೇನೆಯ 13 ಮಂದಿ ಮೃತಪಟ್ಟಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತೆರವು ಕಾರ್ಯಾಚರಣೆ ಗಡುವು ಹತ್ತಿರಕ್ಕೆ ಬರುತ್ತಿದ್ದಂತೆ ದಾಳಿಯ ಭೀತಿಯು ಹೆಚ್ಚಾಗಿದೆ. ಅಫ್ಗಾನಿಸ್ತಾನದಲ್ಲಿ ಉಗ್ರ ಸಂಘಟನೆಗಳು ಇನ್ನಷ್ಟು ದಾಳಿ ನಡೆಸಬಹುದು ಎಂದು ಶ್ವೇತಭವನ ಮತ್ತು ಪೆಂಟಗನ್‌ ಎಚ್ಚರಿಕೆ ನೀಡಿದೆ.

ಅಫ್ಗಾನಿಸ್ತಾನದ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವಂತೆ ಅಮೆರಿಕ ಸೂಚಿಸಿದೆ.

‘ಮುಂಬರುವ ಕೆಲವು ದಿನಗಳು ತೆರವು ಕಾರ್ಯಾಚರಣೆಗೆ ಅತ್ಯಂತ ಅಪಾಯಕಾರಿಯಾಗಿದೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT