ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ಗೆ ಯುದ್ಧದ ಎಚ್ಚರಿಕೆ ನೀಡಿದ ಅಹ್ಮದ್‌ ಮಸೂದ್‌

Last Updated 22 ಆಗಸ್ಟ್ 2021, 15:03 IST
ಅಕ್ಷರ ಗಾತ್ರ

ದುಬೈ: ಅಫ್ಗಾನಿಸ್ತಾನದ ಸೋವಿಯತ್ ವಿರೋಧಿ ಹೋರಾಟದ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿರುವ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್‌ ಮಸೂದ್‌ ತಾಲಿಬಾನ್‌ಗೆ ಯುದ್ಧದ ಎಚ್ಚರಿಕೆ ನೀಡಿದ್ದಾರೆ.

ನನ್ನ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ತಾಲಿಬಾನಿಗಳಿಗೆ ಬಿಟ್ಟುಕೊಡುವುದಿಲ್ಲ ಎಂದು ಅವರು ಹೇಳಿರುವುದಾಗಿ ದುಬೈ ಮೂಲದ ‘ಅಲ್-ಅರೇಬಿಯಾ’ ಸುದ್ದಿ ವಾಹಿನಿ ಭಾನುವಾರ ವರದಿ ಮಾಡಿದೆ.

ದೇಶದಲ್ಲಿ ಆಡಳಿತ ನಡೆಸಲು ತಾಲಿಬಾನ್‌ ಅನ್ನೂ ಒಳಗೊಂಡಂತೆ ಸಮಗ್ರ ಸರ್ಕಾರ ರಚನೆಗೆ ಅಹ್ಮದ್‌ ಮಸೂದ್‌ ಕರೆ ನೀಡಿದ್ದಾರೆ. ‘ಒಂದು ವೇಳೆ ಬಂಡೂಕೋರರೇನಾದರೂ ಮಾತುಕತೆಯನ್ನು ನಿರಾಕರಿಸಿದರೆ, ಯುದ್ಧ ಅನಿವಾರ್ಯವಾಗಲಿದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಹ್ಮದ್‌ ಮಸೂದ್‌ ಅವರು ಕಾಬೂಲ್‌ಗೆ ಸಮೀಪದ ಪಂಜ್‌ಶೀರ್ ಪ್ರಾಂತ್ಯದ ಮೇಲೆ ಹಿಡಿತ ಹೊಂದಿದ್ದು, ಅದನ್ನು ಇನ್ನೂ ತಾಲಿಬಾನ್‌ ವಶಕ್ಕೆ ಒಪ್ಪಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT