ಶನಿವಾರ, ಮಾರ್ಚ್ 6, 2021
31 °C

ಇಂಡೊನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 81ಕ್ಕೆ ಏರಿಕೆ, ತೀವ್ರಗೊಂಡ ಪರಿಹಾರ ಕಾರ್ಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಮಮುಜು (ಇಂಡೊನೇಷ್ಯಾ): ಇತ್ತೀಚೆಗೆ ಇಂಡೋನೇಷ್ಯಾದ ಸುಲೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸತ್ತವರ ಸಂಖ್ಯೆ 81ಕ್ಕೆ ಏರಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಭೂಕಂಪದಿಂದಾಗಿ ಮಮುಜು ಮತ್ತು ಮಜೆನೆ ನಗರಗಳಲ್ಲಿ ಕಟ್ಟಡಗಳು ಕುಸಿದುಬಿದ್ದಿವೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರಿಗಾಗಿ ವಿಪತ್ತು ನಿರ್ವಹಣಾ ತಂಡಗಳು ಸೋಮವಾರ ಪರಿಹಾರ ಕಾರ್ಯವನ್ನು ತೀವ್ರಗೊಳಿಸಿವೆ.

ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ಸುಲವೇಸಿ ದ್ವೀಪದ ಈ ಎರಡು ಪ್ರಮುಖ ನಗರಗಳಲ್ಲಿ ಪರಿಹಾರ ಕಾರ್ಯ ತೀವ್ರಗೊಂಡಿದೆ. ಈ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಮತ್ತು ವಿಪತ್ತು ಕಾರ್ಯಾಚರಣೆ ಪಡೆಯವರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಸುಲವೇಸಿ ದ್ವೀಪದ ಮಮುಜು ನಗರ ಮತ್ತು ಮಜೆನೆ ಜಿಲ್ಲೆಯ ಕೆಲವುಭಾಗಗಳಲ್ಲಿ ಶುಕ್ರವಾರ ಮುಂಜಾನೆ ಭೂಕಂಪ ಸಂಭವಿಸಿತು. ರಿಕ್ಟರ್‌ ಮಾಪಕದಲ್ಲಿ 6.2ಷ್ಟು ಭೂಕಂಪದ ತೀವ್ರತೆ ದಾಖಲಾಗಿತ್ತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ರಾದಿತ್ಯಾ ಜತಿ ತಿಳಿಸಿದ್ದಾರೆ.

ಮಮುಜು ಜನಗರದಲ್ಲಿ 70 ಹಾಗೂ ಮಜೆನೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 27850 ಮಂದಿ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ ಅರ್ಧದಷ್ಟು ಜನ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಎರಡು ನಗರಗಳಲ್ಲಿ ನಿರಾಶ್ರಿತರಿಗೆ ಸ್ವಯಂ ಸೇವಕರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು