ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್‌ ಶಾಂತಿ ಪುರಸ್ಕಾರ: ನೆಚ್ಚಿನ ಸ್ಪರ್ಧಿಗಳ ಪಟ್ಟಿಯಲ್ಲಿ ಜುಬೈರ್‌, ಸಿನ್ಹಾ

Last Updated 5 ಅಕ್ಟೋಬರ್ 2022, 16:19 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕರಾದ ಪ್ರತೀಕ್‌ ಸಿನ್ಹಾ ಮತ್ತು ಮೊಹಮ್ಮದ್‌ ಜುಬೈರ್‌ ಹಾಗೂ ಭಾರತದ ಲೇಖಕ ಹರ್ಷ್‌ ಮಂದೆರ್‌ ಅವರು ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರ ಪಡೆಯುವ ನೆಚ್ಚಿನ ಸ್ಪರ್ಧಿಗಳೆನಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನಾರ್ವೆಯ ಒಸ್ಲೊದಲ್ಲಿ ಇದೇ 7ರಂದು ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಲಾಗುತ್ತದೆ. ಜಾಗತಿಕ ಮಟ್ಟದ ಪ್ರತಿಷ್ಠಿತ ಗೌರವ ಯಾರಿಗೆ, ಯಾವ ಸಂಸ್ಥೆಗೆ ಒಲಿಯಬಹುದು ಎಂಬುದರ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿವೆ.

ದಿ ಪೀಸ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ಓಸ್ಲೊ (ಪಿಆರ್‌ಐಒ) ನಿರ್ದೇಶಕ ಹೆನ್ರಿಕ್‌ ಉರ್ದಾಲ್‌ ಬಿಡುಗಡೆ ಮಾಡಿರುವ ಸಂಭಾವ್ಯರ ಪಟ್ಟಿಯಲ್ಲಿ ಜುಬೈರ್‌, ಪ್ರತೀಕ್‌ ಹಾಗೂ ಮಂದೆರ್‌ ಅವರ ಹೆಸರುಗಳಿವೆ. ಮಂದೆರ್‌ ಅವರು 2017ರಲ್ಲಿ ‘ಕರ್ವಾನ್‌ ಇ ಮೊಹಬ್ಬತ್‌’ ಎಂಬ ಅಭಿಯಾನ ಆರಂಭಿಸಿದ್ದರು.

ನಾಗರಿಕರು ಮಾಡಿರುವ ನಾಮನಿರ್ದೇಶನ, ಬುಕ್ಕಿಗಳ ಊಹೆ ಹಾಗೂ ಪೀಸ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ಓಸ್ಲೊ ಆಯ್ಕೆ ಮಾಡಿರುವ ಸಂಭಾವ್ಯರ ಪಟ್ಟಿಯ ಆಧಾರದಲ್ಲಿ ಟೈಮ್‌ ನಿಯತಕಾಲಿಕೆಯು ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲವರ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಇದರಲ್ಲಿ ಜುಬೈರ್‌ ಮತ್ತು ಪ್ರತೀಕ್‌ ಅವರ ಜೊತೆಗೆಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ, ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ, ಬೆಲಾರಸ್‌ನ ಹೋರಾಟಗಾರ್ತಿ ಸ್ವಿಯಾಟ್ಲಾನಾ ಸಿಖಾನೌಸ್ಕಾಯ, ಡಬ್ಲ್ಯುಎಚ್‌ಒ, ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ, ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆತಾ ಥನ್‌ಬರ್ಗ್‌ ಅವರ ಹೆಸರು ಮುಂಚೂಣಿಯಲ್ಲಿವೆ.

ಟ್ವೀಟ್‌ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಜುಬೈರ್‌ ಅವರನ್ನು ದೆಹಲಿ ‍ಪೊಲೀಸರು ಬಂಧಿಸಿದ್ದರು. ಅವರ ಬಂಧನಕ್ಕೆ ಜಗತ್ತಿನೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT