ಬುಧವಾರ, ಮೇ 18, 2022
27 °C

ಶಾ‌ರ್ಜಾ ಪುಸ್ತಕ ಮೇಳದಲ್ಲಿ ‘100 ಗ್ರೇಟ್ ಇಂಡಿಯನ್ ಪೊಯಮ್ಸ್’ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಭಾರತೀಯ ರಾಜತಾಂತ್ರಿಕ ಮತ್ತು ಖ್ಯಾತ ಸಾಹಿತಿ ಅಭಯ್ ಕೆ. ಅವರು ಸಂಪಾದಿಸಿರುವ ಆಯ್ದ ‘100 ಗ್ರೇಟ್ ಇಂಡಿಯನ್ ಪೊಯಮ್ಸ್’ ಅರೇಬಿಕ್ ಆವೃತ್ತಿಯ ಕೃತಿಯನ್ನು ಶಾರ್ಜಾ ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.

ಅರೇಬಿಕ್ ಭಾಷೆಯಲ್ಲಿರುವ ‘100 ಕಸೀದತ್ ಹಿಂದಿಯಾ ರೈಯೆಹ್’ ಪುಸ್ತಕವು 3,000 ವರ್ಷಗಳ ಭಾರತೀಯ ಕಾವ್ಯ ಇತಿಹಾಸ ಸಾರುವ, 28 ಭಾರತೀಯ ಭಾಷೆಗಳ ಕವಿತೆಗಳನ್ನು ಒಳಗೊಂಡಿದೆ.

‘100 ಗ್ರೇಟ್ ಇಂಡಿಯನ್ ಪೊಯಮ್ಸ್' ಈಗಾಗಲೇ ಯುರೋಪ್ ಮತ್ತು ಆಫ್ರಿಕಾದ ಐದು ಭಾಷೆಗಳಿಗೆ ಅನುವಾದಗೊಂಡಿದೆ. ಶಾರ್ಜಾ ಇನ್‌ಸ್ಟಿಟ್ಯೂಟ್ ಫಾರ್ ಹೆರಿಟೇಜ್ ಈ ಪುಸ್ತಕವನ್ನು ಅರೇಬಿಕ್‌ಗೆ ಅನುವಾದಿಸಿ ಪ್ರಕಟಿಸಿದೆ.

ಅಭಯ್ ಅವರು ‘ದಿ ಮ್ಯಾಜಿಕ್ ಆಫ್ ಮಡಗಾಸ್ಕರ್’ (ಎಲ್’ ಹರ್ಮಟ್ಟನ್ ಪ್ಯಾರಿಸ್, 2021), ‘ದಿ ಆಲ್ಫಾಬೆಟ್ಸ್ ಆಫ್ ಲ್ಯಾಟಿನ್ ಅಮೇರಿಕಾ’(ಬ್ಲೂಮ್ಸ್‌ಬರಿ ಇಂಡಿಯಾ, 2020), ಮತ್ತು ‘ದಿ ಬುಕ್ ಆಫ್ ಬಿಹಾರಿ ಲಿಟರೇಚರ್’, (ಹಾರ್ಪರ್ ಕಾಲಿನ್ಸ್, 2022) ನ ಸಂಪಾದಕರಾಗಿರುವುದು ಸೇರಿ ಒಂಬತ್ತು ಕವನ ಸಂಕಲನಗಳ ಲೇಖಕರಾಗಿದ್ದಾರೆ. ಅವರ ‘ಭೂಮಿಯ ಗೀತೆ’ 120ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ.

ನ.3ರಿಂದ ಆರಂಭವಾಗಿರುವ ಪುಸ್ತಕ ಮೇಳ ಇದೇ 13ರವರೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು