ನ್ಯೂಯಾರ್ಕ್: ಏಷ್ಯಾ, ಆಫ್ರಿಕಾ ಮೂಲದ ಅಮೆರಿಕನ್ನರು ಈ ಬಾರಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಸಂದರ್ಭದಲ್ಲಿ ಶ್ವೇತವರ್ಣೀಯರು ಅಲ್ಪಪ್ರಮಾಣದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನೇ ಮತ್ತೆ ಬೆಂಬಲಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಆನ್‌ಲೈನ್ ಮೂಲಕ ಸೆಪ್ಟೆಂಬರ್ ಅಂತ್ಯದಿಂದ ಅಕ್ಟೋಬರ್‌ವರೆಗೂ ಸಂಗ್ರಹಿಸಲಾದ ಸುಮಾರು 71,000 ಜನರ ಅಭಿಪ್ರಾಯಗಳನ್ನು ಆಧರಿಸಿ 2020ರ ಕೋಆಪರೇಟಿವ್ ಎಲೆಕ್ಷನ್ ಸ್ಟಡಿ ಈ ಸಮೀಕ್ಷೆ ನಡೆಸಿದೆ.

ಇದರ ಪ್ರಕಾರ, ಶೇ 51ರಷ್ಟು ಮತದಾರರು ಬೈಡನ್ ಅವರಿಗೂ, ಶೇ 43ರಷ್ಟು ಮತದಾರರು ಟ್ರಂಪ್ ಪರವಾಗಿಯೂ ಒಲವು ತೋರಿದ್ದಾರೆ.

ಬೈಡನ್ ಅವರ ಪರವಾಗಿ 18–29 ಮತ್ತು 30–44 ವಯಸ್ಸಿನವರಲ್ಲಿ ಶೇ 53ರಷ್ಟು ಮಂದಿ ಒಲವು ತೋರಿದ್ದರೆ, 65 ವರ್ಷ ಆಸುಪಾಸಿನ ವಯಸ್ಸಿನವರಲ್ಲಿ ಶೇ 43ರಷ್ಟು ಮಂದಿ ಟ್ರಂಪ್ ಪರವಾಗಿ ಒಲವು ಹೊಂದಿದ್ದಾರೆ.

ವಸ್ತ್ರ, ವರ್ಣ ಆಧಾರದಲ್ಲಿ ಮತದಾರರನ್ನು ವರ್ಗೀಕರಿಸಿದ ಈ ಸಮೀಕ್ಷೆಯ ಪ್ರಕಾರ, ಏಷಿಯಾ ಮೂಲದ ಅಮೆರಿಕನ್ನರಲ್ಲಿ ಶೇ 65ರಷ್ಟು ಮಂದಿ ಬೈಡನ್ ಅವರಿಗೆ ಬೆಂಬಲಿಸಿದ್ದರೆ, ಶೇ 28ರಷ್ಟು ಜನರಷ್ಟೇ ಟ್ರಂಪ್ ಬೆಂಬಲಿಸಲು ತೀರ್ಮಾನಿದ್ದಾರೆ.

ಕಪ್ಪು ವರ್ಣೀಯರಲ್ಲಿ ಹೆಚ್ಚಿನ ಪ್ರಮಾಣದ ಅಂದರೆ ಶೇ 86ರಷ್ಟು ಮತದಾರರು ಬೈಡನ್ ಪರವಾಗಿ ಧ್ವನಿ ಎತ್ತಿದ್ದಾರೆ. ಉಳಿದಂತೆ, ಶ್ವೇತ ವರ್ಣೀಯರಲ್ಲಿ ಶೇ 49ರಷ್ಟು ಮತದಾರರು ಟ್ರಂಪ್ ಅವರಿಗೆ ಬೆಂಬಲಿಸುತ್ತಿದ್ದರೆ, ಶೇ 45ರಷ್ಟ ಮತದಾರರು ಬೈಡನ್ ಅವರನ್ನು ಬೆಂಬಲಿಸುತ್ತಿದ್ದಾರೆ.

ವಿಶ್ವವಿದ್ಯಾಲಯದ ಸಂಶೋಧಕರನ್ನು ಒಳಗೊಂಡ ತಂಡವೊಂದು ಇಂಥ ಸಮೀಕ್ಷೆಯನ್ನು 2006ರಿಂದಲೂ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.