ಶನಿವಾರ, ಸೆಪ್ಟೆಂಬರ್ 26, 2020
26 °C

ಲಕ್ಷಣರಹಿತ ಸೋಂಕಿತರಿಂದಲೂ ಗಮನಾರ್ಹ ಪ್ರಮಾಣದಲ್ಲಿ ಹರಡುತ್ತೆ ಕೊರೊನಾ: ಅಧ್ಯಯನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Coronavirus

ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿತರು ರೋಗ ಲಕ್ಷಣ ಹೊಂದಿರದಿದ್ದರೂ ಸೋಂಕು ಹರಡುವ ಸಾಧ್ಯತೆ ಗಮನಾರ್ಹ ಪ್ರಮಾಣದಲ್ಲಿದೆ. ಲಕ್ಷಣರಹಿತ ಸೋಂಕಿತರ ಮೂಗು, ಗಂಟಲು, ಶ್ವಾಸಕೋಶದಲ್ಲಿಯೂ ಲಕ್ಷಣಸಹಿತ ಸೋಂಕಿತರಲ್ಲಿರುವಷ್ಟೇ ಪ್ರಮಾಣದಲ್ಲಿ ವೈರಸ್ ಇರುತ್ತದೆ ಎಂದು ದಕ್ಷಿಣ ಕೊರಿಯಾದ ಹೊಸ ಅಧ್ಯಯನ ವರದಿ ತಿಳಿಸಿದೆ. ‘ಜೆಎಎಂಎ ಇಂಟರ್ನಲ್ ಮೆಡಿಸಿನ್’ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಸೂನ್‌ಚನ್‌ಹ್ಯಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಸೆಯುಂಗ್ಜೆ ಲೀ ನೇತೃತ್ವದ ಸಂಶೋಧಕರ ತಂಡವು ಮಾರ್ಚ್‌6ರಿಂದ 26ರ ವರೆಗೆ ಸೋಂಕಿತರಾದ 303 ಮಂದಿಯ ಮಾದರಿಯನ್ನು ಅಧ್ಯಯನಕ್ಕೆ ಒಳಪಡಿಸಿ ವರದಿ ಸಿದ್ಧಪಡಿಸಿದೆ.

22ರಿಂದ 36 ವರ್ಷ ವವಯಸ್ಸಿನ ವರೆಗಿನವರ ಮಾದರಿಯನ್ನು ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿತ್ತು. ಇದರಲ್ಲಿ ಮೂರನೇ ಎರಡರಷ್ಟು ಮಂದಿ ಮಹಿಳೆಯರಾಗಿದ್ದರು. 193 ಮಂದಿ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ 110 ಮಂದಿ ಲಕ್ಷಣರಹಿತ ಸೋಂಕಿತರಾಗಿದ್ದರು. ಈ ಪೈಕಿ ಆರಂಭದಲ್ಲೇ ಲಕ್ಷಣರಹಿತರಾಗಿದ್ದ 89 ಮಂದಿಯಲ್ಲಿ (ಶೇ 30ರಷ್ಟು) ಎಂದಿಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರಲೇ ಇಲ್ಲ.

ಆದರೆ, ಲಕ್ಷಣ ಹೊಂದಿರುವ ಸೋಂಕಿತರ ಜತೆ ಹೋಲಿಸಿದರೆ ಲಕ್ಷಣರಹಿತ ಸೋಂಕಿತರು ಬೇಗನೇ ಗುಣಮುಖರಾಗುತ್ತಾರೆ. ಇವರಿಗೆ 17 ದಿನಗಳಲ್ಲಿ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರೆ, ಲಕ್ಷಣ ಹೊಂದಿರುವ ಸೋಂಕಿತರ ವರದಿ ನೆಗೆಟಿವ್ ಬರಲು 19.5 ದಿನ ಬೇಕಾಗಿತ್ತು ಎಂದೂ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು