ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಪ್ರವಾಹ, ಭೂಕುಸಿತ: 31 ಮಂದಿ ಸಾವು

Last Updated 28 ಅಕ್ಟೋಬರ್ 2022, 13:01 IST
ಅಕ್ಷರ ಗಾತ್ರ

ಕೊಟಬಾಟೊ, ಫಿಲಿಪ್ಪೀನ್ಸ್‌:ಧಾರಾಕಾರ ಮಳೆಯಿಂದ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ದಕ್ಷಿಣ ಫಿಲಿಪ್ಪೀನ್ಸ್‌ ಪ್ರಾಂತ್ಯದಲ್ಲಿ ಕನಿಷ್ಠ 31 ಮಂದಿ ಸಾವಿಗೀಡಾಗಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಮಗಿಂದನಾವೊ ಪ್ರಾಂತ್ಯದ ಮೂರು ನಗರಗಳಲ್ಲಿ ಸಂತ್ರಸ್ತರು ಪ್ರವಾಹದ ನೀರಿನಲ್ಲಿ ಹಾಗೂ ಮಣ್ಣಿನ ಕುಸಿತದಿಂದ ಕೊಚ್ಚಿ ಹೋಗಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕಳೆದ ರಾತ್ರಿ ಅಧಿಕ ಮಳೆಯಾದ ಕಾರಣದಿಂದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಶುಕ್ರವಾರ ಬೆಳಿಗ್ಗೆಯಿಂದ ಪ್ರವಾಹದಲ್ಲಿ ಇಳಿಕೆಯಾಗಿದೆ. ಮೇಯರ್‌ಗಳು, ಗವರ್ನರ್‌ಗಳು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ನೀಡಿದ ವರದಿಗಳ ಆಧಾರದ ಮೇಲೆ, 26 ಮಂದಿಮಗಿಂದನಾವೊ ಪ್ರಾಂತ್ಯದ ಕರಾವಳಿ ಪಟ್ಟಣಗಳಾದ ಡಾಟು ಓಡಿನ್ ಸಿನ್‌ಸುಯಾಟ್ ಮತ್ತು ಡಾಟು ಬ್ಲಾ ಸಿನ್‌ಸುಯಾಟ್‌ನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಇತರ ಐದು ಮಂದಿ ಯುಪಿ ಪಟ್ಟಣದಲ್ಲಿ ಸಾವಿಗೀಡಾಗಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT