ಸೋಮವಾರ, ಜುಲೈ 4, 2022
22 °C
ಭಯೋತ್ಪಾದಕರ ವಿರುದ್ಧ ಹೋರಾಟ: ಪ್ರಧಾನಿ ಬೆನೆಟ್ ಪ್ರತಿಜ್ಞೆ

ಇಸ್ರೇಲ್‌: ಗುಂಡಿನ ದಾಳಿ, ಕನಿಷ್ಠ ಐವರು ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೆರುಸಲೇಮ್‌: ಇಸ್ರೇಲ್‌ನ ಟೆಲ್‌ ಅವಿವ್‌ ಉಪನಗರದಲ್ಲಿ ಮಂಗಳವಾರ ಸಂಜೆ ನಡೆದ ಗುಂಡಿನ ದಾಳಿಯೊಂದರಲ್ಲಿ ಕನಿಷ್ಠ ಐದು ಜನ ಮೃತಪಟ್ಟಿದ್ದಾರೆ. ಭಯೋತ್ಪಾದಕ ದಾಳಿಯಿಂದ ಇಸ್ರೇಲ್‌ ಕಂಗೆಟ್ಟಿದ್ದು ವಾರದಲ್ಲಿ ಇದು ಮೂರನೇ ದಾಳಿಯಾಗಿದೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 

ಭಯೋತ್ಪಾದಕರ ಈ ದಾಳಿಗೆ ಬಲವಾದ ಪ್ರತ್ಯುತ್ತರವನ್ನು ನೀಡುವುದಾಗಿ ಪ್ರಧಾನಿ ನಫ್ತಾಲಿ ಬೆನೆಟ್‌ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೆ ದಾಳಿ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

‘ಇಸ್ರೇಲ್‌ ಈಗ ಕೊಲೆಗಡುಕ ಅರಬ್‌ ಭಯೋತ್ಪಾದಕತೆಯನ್ನು ಎದುರಿಸುತ್ತಿದೆ. ಭದ್ರತಾ ಪಡೆಗಳು ಈ ಬಗ್ಗೆ ಎಚ್ಚರ ವಹಿಸಿವೆ. ಕಠಿಣ ಪರಿಶ್ರಮ, ಶ್ರದ್ಧೆ ಮೂಲಕ ಬಲವಾದ ಶಕ್ತಿಗಳಿಂದ ನಾವು ಭಯೋತ್ಪಾದಕತೆ ವಿರುದ್ಧ ಹೋರಾಡುತ್ತೇವೆ’ ಎಂದು ಬೆನೆಟ್‌ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. 

ಟೆಲ್ ಅವಿವ್ ಬಳಿಯ ಬಿನೆ ಬ್ರಾಕ್‌ನ ಎರಡು ಪ್ರದೇಶಗಳಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್‌ ವಕ್ತಾರರೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು