ಗುರುವಾರ , ಜೂನ್ 24, 2021
25 °C

ಭಾರತದಿಂದ ಬರುವ ಆಸ್ಟ್ರೇಲಿಯನ್ನರಿಗೆ ನಿಷೇಧ: ಮೇ 15ಕ್ಕೆ ಹಿಂತೆಗೆತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಕೋವಿಡ್ ಪೀಡಿತ ಭಾರತದಿಂದ ಸ್ವದೇಶಕ್ಕೆ ಬರುವ ಆಸ್ಟ್ರೇಲಿಯಾದ ನಾಗರಿಕರಿಗೆ ಹೇರಿದ್ದ ನಿಷೇಧವನ್ನು ಮುಂದಿನ ಶನಿವಾರ (ಮೇ 15) ಹಿಂತೆಗೆದುಕೊಳ್ಳಲಾಗುವುದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶುಕ್ರವಾರ ತಿಳಿಸಿದ್ದಾರೆ.

ಮೇ 15ರಂದು ಭಾರತದಿಂದ ಬರುವ ಮೊದಲ ವಿಮಾನ ಡಾರ್ವಿನ್ ನಗರ ವಿಮಾ ನಿಲ್ದಾಣದಲ್ಲಿ ಇಳಿಯಲಿದೆ. ವಿಮಾನ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದೂ ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರವು ಇದೇ ಮೊದಲ ಬಾರಿಗೆ ತನ್ನ ನಾಗರಿಕರಿಗೆ ಸ್ವದೇಶಕ್ಕೆ ಹಿಂತಿರುಗಲು ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು. ಆಸ್ಟ್ರೇಲಿಯಾಕ್ಕೆ ಬರುವ ಮುನ್ನ ನಾಗರಿಕರು 14 ದಿನ ಭಾರತದಲ್ಲಿದ್ದರೆ ಅಂಥವರು ಸ್ವದೇಶಕ್ಕೆ ಹಿಂತಿರುಗುವಂತಿಲ್ಲ. ಒಂದು ವೇಳೆ ಈ ನಿಷೇಧವನ್ನು ಮೀರಿದರೆ ಅವರಿಗೆ 5 ವರ್ಷಗಳ ಜೈಲುಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸುವುದಾಗಿಯೂ ತಿಳಿಸಿತ್ತು.

ಮೋದಿ–ಮಾರಿಸನ್‌ ಮಾತುಕತೆ: ಈ ಮಧ್ಯೆ, ಪ್ರಧಾನಿ ಮೋದಿ ಅವರು ಮಾರಿಸನ್‌ ಜತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕೋವಿಡ್ ಸಮಯದಲ್ಲಿ ಸಹಕಾರ, ಇಂಡೊ–ಫೆಸಿಫಿಕ್‌ ವಲಯದಲ್ಲಿನ ಶಾಂತಿ ಮೊದಲಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು