ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷದವರೆಗೂ ಆಸ್ಟ್ರೇಲಿಯಾ ಪ್ರವಾಸ ಅಸಾಧ್ಯ

ವಿದ್ಯಾರ್ಥಿಗಳು, ಕುಶಲ ಕಾರ್ಮಿಕರಿಗೆ ಮೊದಲ ಆದ್ಯತೆ–ಪ್ರವಾಸಿಗರಿಗೆ ಬಳಿಕ ಅವಕಾಶ
Last Updated 5 ಅಕ್ಟೋಬರ್ 2021, 7:00 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಲು ಬಯಸುವವರು ಮುಂದಿನ ವರ್ಷದವರೆಗೂ ಕಾಯುವುದು ಅನಿವಾರ್ಯವಾಗಲಿದ್ದು, ಕುಶಲ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಶೀಘ್ರ ದೇಶದೊಳಕ್ಕೆ ಬರಲು ಅವಕಾಶ ನೀಡುವ ಸಾಧ್ಯತೆ ಇದೆ.‌

‘ಸೆವೆನ್‌ ನೆಟ್‌ವರ್ಕ್‌’ ವಾಹಿನಿಗೆ ನೀಡಿದ ಸಂದರ್ಶಶನದಲ್ಲಿ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಈ ವಿಷಯ ತಿಳಿಸಿದ್ದು, ದೇಶದಲ್ಲಿ 16 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯೋಮಾನದ ಶೇ 80ರಷ್ಟು ಮಂದಿ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ನಿರ್ಬಂಧ ಸಡಿಲಿಕೆ ಪ್ರಕ್ರಿಯೆ ಆರಂಭವಾಗುತ್ತಿದೆ ಎಂದು ಹೇಳಿದ್ದಾರೆ.

‘ಎರಡು ಡೋಸ್‌ ಲಸಿಕೆ ಪಡೆದ ನುರಿತ ಕೆಲಸಗಾರರಿಗೆ ಮತ್ತು ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ಬಂದು ವಾಪಸಾಗುವ ವಿದೇಶಿ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಪ್ರವೇಶಕ್ಕೆ ಮೊದಲಾಗಿ ಅವಕಾಶ ಕಲ್ಪಿಸಲಾಗುತ್ತದೆ, ಬಹುತೇಕ ಇದು ನವೆಂಬರ್‌ನಿಂದ ಆರಂಭವಾಗಬಹುದು, ಪ್ರವಾಸಿಗರಿಗೆ ಮುಂದಿನ ವರ್ಷವಷ್ಟೇ ದೇಶದೊಳಗೆ ಬರಲು ಅವಕಾಶ ಸಿಗಬಹುದಷ್ಟೇ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT