ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ನಿಂದ ಆಸ್ಟ್ರೇಲಿಯಾದ ಕಾನೂನು ಉಲ್ಲಂಘನೆ: ಫೆಡರಲ್ ನ್ಯಾಯಾಲಯ

ವೈಯಕ್ತಿಕ ಸ್ಥಳದ ದತ್ತಾಂಶ ಸಂಗ್ರಹದ ಮೂಲಕ ಬಳಕೆದಾರರ ದಾರಿ ತಪ್ಪಿಸುತ್ತಿರುವ ಆರೋಪ
Last Updated 16 ಏಪ್ರಿಲ್ 2021, 6:07 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ, ಆಸ್ಟ್ರೇಲಿಯಾ: ಆಂಡ್ರಾಯ್ಡ್ ಮೊಬೈಲ್ ಸಾಧನಗಳೊಂದಿಗೆ ವೈಯಕ್ತಿಕ ಸ್ಥಳದ ದತ್ತಾಂಶ ಸಂಗ್ರಹಿಸುವ ಮೂಲಕ ಬಳಕೆದಾರರನ್ನು ದಾರಿ ತಪ್ಪಿಸುತ್ತಿರುವ ಗೂಗಲ್‌, ಆಸ್ಟ್ರೇಲಿಯಾದ ಕಾನೂನನ್ನು ಉಲ್ಲಂಘಿಸಿದೆ ಎಂದು ನ್ಯಾಯಾಧೀಶರು ಶುಕ್ರವಾರ ತಿಳಿಸಿದ್ದಾರೆ.

ಫೆಡರಲ್ ನ್ಯಾಯಾಲಯದ ಈ ನಿರ್ಧಾರದಿಂದ ಆಸ್ಟ್ರೇಲಿಯಾದ ಕಾನೂನು ಮತ್ತು ಗ್ರಾಹಕ ಆಯೋಗಕ್ಕೆ ಭಾಗಶಃ ಗೆಲುವು ಸಿಕ್ಕಂತಾಗಿದೆ. ಈ ಗ್ರಾಹಕ ಆಯೋಗ, ಅಕ್ಟೋಬರ್ 2019ರಿಂದ ಗ್ರಾಹಕರ ಕಾನೂನು ಉಲ್ಲಂಘನೆಗಾಗಿ ಗೂಗಲ್‌ ವಿರುದ್ಧ ಕ್ರಮ ಜರುಗಿಸುತ್ತಿದೆ.

ನ್ಯಾಯಮೂರ್ತಿ ಥಾಮಸ್ ಥಾವ್ಲೆ ಅವರು ‘ಗೂಗಲ್‌ ಆಂಡ್ರಾಯ್ಡ್‌ ಮೊಬೈಲ್ ಸಾಧನಗಳ ಮೂಲಕ ಜನವರಿ 2017 ಮತ್ತು ಡಿಸೆಂಬರ್ 2018ರ ನಡುವಿನ ವೈಯಕ್ತಿ ಸ್ಥಳದ ದತ್ತಾಂಶವನ್ನು ಸಂಗ್ರಹಿಸುವ ಮೂಲಕ ಬಳಕೆದಾರರ ದಾರಿ ತಪ್ಪಿಸುತ್ತಿರುವುದನ್ನು ಗುರುತಿಸಿದ್ದಾರೆ.

‘ಇದು ಗ್ರಾಹಕರಿಗೆ, ವಿಶೇಷವಾಗಿ ಆನ್‌ಲೈನ್‌ನಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವ ಹಾಗೂ ಕಾಳಜಿ ವಹಿಸುವವರಿಗೆ ದೊರೆತಿರುವ ಒಂದು ಪ್ರಮುಖ ಗೆಲುವು. ನ್ಯಾಯಾಲಯದ ಈ ನಿರ್ಧಾರ, ಗೂಗಲ್ ಸೇರಿದಂತೆ ಯಾವುದೇ ದೊಡ್ಡ ಉದ್ಯಮಗಳು ತಮ್ಮ ಗ್ರಾಹಕರನ್ನು ದಾರಿ ತಪ್ಪಿಸಬಾರದು ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ‘ ಎಂದು ಆಯೋಗದ ಅಧ್ಯಕ್ಷ ರಾಡ್ ಸಿಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಇದು ವಿಶ್ವದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಪ್ರಕರಣದಲ್ಲಿ ಗೆಲುವು ಸಿಕ್ಕಿದ್ದು, ನಮಗೆ ತುಂಬಾ ಸಂತೋಷವಾಗಿದೆ‘ ಎಂದು ರಾಡ್‌ ಸೀಮ್ಸ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲುಗೂಗಲ್‌ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT