ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ರೋಗಿಯ ಆಸ್ಪತ್ರೆಗೆ ದಾಖಲು ಸಾಧ್ಯತೆ ಹೆಚ್ಚಿಸುವ ಅಜಿಥ್ರೊಮೈಸಿನ್: ಅಧ್ಯಯನ

Last Updated 19 ಜುಲೈ 2021, 10:12 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೋವಿಡ್ ರೋಗಿಗಳಲ್ಲಿ ಸೋಂಕು ತಡೆಗಟ್ಟಲು ಸಾಮಾನ್ಯವಾಗಿ ನೀಡುವ ಅಜಿಥ್ರೊಮೈಸಿನ್‌ ಆ್ಯಂಟಿಬಯೊಟಿಕ್ ಔಷಧವು ಪ್ಲಸೀಬೊ ವಿಧಾನಕ್ಕಿಂತ ಹೆಚ್ಚು ಪರಿಣಾಮಕಾರಿಯಲ್ಲ ಮತ್ತು ವಾಸ್ತವವಾಗಿ ಇದು ರೋಗಿಯು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.

ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್‌ನಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ 263 ಕೋವಿಡ್ ರೋಗಿಗಳು ಭಾಗವಹಿಸಿದ್ದರು. ಅಧ್ಯಯನಕ್ಕೆ ಒಳಪಡಿಸಿದಾಗ ಯಾರೊಬ್ಬರೂ ಆಸ್ಪತ್ರೆಗೆ ದಾಖಲಾಗಿರಲಿಲ್ಲ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಇದಕ್ಕಾಗಿ ರೋಗಿಗಳನ್ನು ರ್‍ಯಾಂಡಮ್‌ ಆಗಿ ಆಯ್ಕೆ ಮಾಡಿದ್ದರು. ಅದರಲ್ಲಿ, 171 ರೋಗಿಗಳಿಗೆ ಒಂದು ಡೋಸ್ 1.2 ಗ್ರಾಂ ಓರಲ್ ಅಜಿಥ್ರೊಮೈಸಿನ್ ನೀಡಿದರೆ, 92 ರೋಗಿಗಳಿಗೆ ಪ್ಲಸೀಬೊ ಚಿಕಿತ್ಸೆ ನೀಡಲಾಗಿತ್ತು.

ಅಧ್ಯಯನದ 14ನೇ ದಿನ, ಎರಡೂ ಗುಂಪುಗಳಲ್ಲಿ ಶೇ. 50 ರಷ್ಟು ಜನರು ರೋಗಲಕ್ಷಣವಿಲ್ಲದೆ ಇರುವುದು ಕಂಡುಬಂದಿತು.

21 ನೇ ದಿನದ ಹೊತ್ತಿಗೆ, ಅಜಿಥ್ರೊಮೈಸಿನ್ ಪಡೆದ ಐದು ಮಂದಿ ಕೋವಿಡ್ -19ರ ತೀವ್ರ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಪ್ಲಸೀಬೊ ಚಿಕಿತ್ಸೆ ಪಡೆದ ಗುಂಪಿನ ಯಾರೊಬ್ಬರೂ ಆಸ್ಪತ್ರೆಗೆ ದಾಖಲಾಗಲಿಲ್ಲ.

‘ಸಾರ್ಸ್-ಕೋವ್-2 ಸೋಂಕಿತ ಹೊರರೋಗಿಗಳಲ್ಲಿ, ಪ್ಲಸೀಬೊಗೆ ಹೋಲಿಸಿದರೆ ಓರಲ್ ಅಜಿಥ್ರೊಮೈಸಿನ್ ಅನ್ನು ಪಡೆದ ರೋಗಿಗಳು 14 ನೇ ದಿನದಲ್ಲಿ ರೋಗಲಕ್ಷಣಗಳಿಂದ ಮುಕ್ತರಾಗುವ ಸಾಧ್ಯತೆ ಇಲ್ಲ.’ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಪ್ಲಸೀಬೊಗೆ ಹೋಲಿಸಿದರೆ ಅಜಿಥ್ರೊಮೈಸಿನ್ ಅನ್ನು ಪಡೆದವರು ರೋಗಲಕ್ಷಣದಿಂದ ಮುಕ್ತವಾಗುವ ಸಾಧ್ಯತೆ ಇಲ್ಲ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT