ಮಂಗಳವಾರ, ಜೂನ್ 22, 2021
28 °C
ಹಿಂಸಾಚಾರ ನಿಯಂತ್ರಣಕ್ಕಾಗಿ ಭದ್ರತೆ ಹೆಚ್ಚಳ, ಫೇಸ್‌ಬುಕ್‌ ಜಾಲತಾಣಕ್ಕೂ ನಿರ್ಬಂಧ

ಬಾಂಗ್ಲಾದೇಶದಲ್ಲಿ ಮೋದಿ ವಿರೋಧಿ ಪ್ರತಿಭಟನೆ: ಬಿಜಿಬಿ ಪಡೆ ನಿಯೋಜಿಸಿದ ಸರ್ಕಾರ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾದೇಶ ಪ್ರವಾಸ ವಿರೋಧಿಸಿ ಇಸ್ಲಾಂ ಮೂಲ ಭೂತವಾದಿಗಳು ಶುಕ್ರವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಕಾನೂನು–ಸುವ್ಯವಸ್ಥೆ ಕಾಪಾಡುವ ಸಲುವಾಗಿ ದೇಶದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಜಧಾನಿ ಢಾಕಾದ ಪ್ರಮುಖ ಮಸೀದಿ ಪ್ರದೇಶದಲ್ಲಿ ಶುಕ್ರವಾರ ಹಿಂಸಾಚಾರ ನಡೆದಿತ್ತು. ಈ ಘಟನೆಯಲ್ಲಿ ಐವರು ಸಾವಿಗೀಡಾಗಿದ್ದರು.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶುಕ್ರವಾರ ರಾತ್ರಿಯಿಂದಲೇ ಬಾರ್ಡರ್‌ ಗಾರ್ಡ್ಸ್‌ ಬಾಂಗ್ಲಾದೇಶ್ (ಬಿಜಿಬಿ) ಪಡೆಗಳನ್ನು ದೇಶದ ವಿವಿಧೆಡೆ ನಿಯೋಜಿಸಲಾಗಿದೆ ಎಂದು ಬಿಜಿಬಿ ವಕ್ತಾರರು ತಿಳಿಸಿದ್ದಾರೆ.

ಹಿಂಸಾಚಾರದ ಚಿತ್ರಗಳು ಮತ್ತು ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಆರಂಭವಾಗುತ್ತಿದ್ದಂತೆ ಶುಕ್ರವಾರ ಮಧ್ಯಾಹ್ನದಿಂದ ದೇಶದಾದ್ಯಂತ ಫೇಸ್‌ಬುಕ್‌ ಅನ್ನು ನಿರ್ಬಂಧಿಸಲಾಯಿತು ಎಂದು ಕಂಪನಿಯ ವಕ್ತಾರರು ತಿಳಿಸಿದರು.

‘ಗೃಹ ಸಚಿವಾಲಯದ ಸೂಚನೆ ಮತ್ತು ಸರ್ಕಾರದ ನೆರವಿನೊಂದಿಗೆ, ದೇಶದ ವಿವಿಧ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯ ಬಿಜಿಬಿಯನ್ನು ನಿಯೋಜಿಸಲಾಗಿದೆ‘ ಎಂದು ಲೆಫ್ಟಿನೆಂಟ್ ಕರ್ನಲ್ ಫೇಜೂರ್ ರಹಮಾನ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಬಿಜಿಪಿ ನಿಯೋಜನೆಯ ನಂತರ ದೇಶದಲ್ಲಿ ಯಾವುದೇ ಹಿಂಸಾಚಾರ ನಡೆದ ವರದಿಗಳು ಬಂದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ‘ ಎಂದು ರಹಮಾನ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು