ಶುಕ್ರವಾರ, ಜೂನ್ 25, 2021
29 °C
13 ದಿನಗಳಿಂದ ಹೊಸ ಪ್ರಕರಣ ಇಲ್ಲ

ಚೀನಾ | ಸೋಂಕು ಪ್ರಕರಣ ಕ್ಷೀಣ; ಮಾರ್ಗಸೂಚಿ ಸಡಿಲಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಸತತ ಹದಿಮೂರು ದಿನಗಳಿಂದ ಕೊರೊನಾದ ಹೊಸ ಸೋಂಕು ಪ್ರಕರಣ ಪತ್ತೆಯಾಗದ ಕಾರಣ ಇಲ್ಲಿನ ಆರೋಗ್ಯ ಇಲಾಖೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರೂಪಿಸಿದ್ದ ಮಾರ್ಗಸೂಚಿಯಲ್ಲಿನ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದೆ.

ಮಾರ್ಗಸೂಚಿಯ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ, ಬೀಜಿಂಗ್‌ನ ಕೆಲವು ಭಾಗಗಳಲ್ಲಿ ನಾಗರಿಕರು ಹಳೆಯ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಈ ಬಗ್ಗೆ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕೆಲವರು, ’ಮಾಸ್ಕ್ ಧರಿಸುತ್ತಿರುವುದು ಮನದಲ್ಲೊಂದು ಸುರಕ್ಷತಾ ಭಾವನೆ ಮೂಡುತ್ತಿದೆ’ ಎಂದು ಹೇಳಿದ್ದರೆ, ಇನ್ನೂ ಕೆಲವರು ’ಸುತ್ತಲಿನ ಜನರು ಬಳಸುತ್ತಿರುವುದರಿಂದ, ನಾವೂ ಬಳಸಬೇಕೆಂಬ ಒತ್ತಡದಿಂದಲೂ, ಮಾಸ್ಕ್ ಧರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

’ನಾನು ಯಾವಾಗ ಬೇಕಾದರೂ ಮಾಸ್ಕ ಇಲ್ಲದೇ ಓಡಾಡ ಬಲ್ಲೆ. ಆದರೆ, ನನ್ನ ಸುತ್ತಲಿನವರು ಅದನ್ನು ಒಪ್ಪಿಕೊಳ್ಳುತ್ತಾರೆಯೇ’ ಎಂದು ಪ್ರಶ್ನಿಸುವ ಬೀಜಿಂಗ್‌ನ 24ರ ಹರೆಯದ ಕಾವೊ, ’ನಾನು ಮಾಸ್ಕ್‌ ಧರಿಸದಿದ್ದರೆ ಸುತ್ತಲಿನವರು ಗಾಬರಿಯಾಗುತ್ತಾರೆ. ಅದಕ್ಕಾಗಿ ನಾನು ಹೆದರಿಕೊಂಡು ಮಾಸ್ಕ್ ಹಾಕಿಕೊಳ್ಳುತ್ತೇನೆ’ ಎನ್ನುತ್ತಾರೆ.

ಲಾಕ್‌ಡೌನ್‌ ನಂತರ ಬೀಜಿಂಗ್‌ನಲ್ಲಿ ಎರಡನೇ ಬಾರಿಗೆ ಈ ರೀತಿ ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು