ಭಾನುವಾರ, ಜೂನ್ 13, 2021
21 °C
ನೇತನ್ಯಾಹು ಜೊತೆ ದೂರವಾಣಿ ಮೂಲಕ ಮಾತುಕತೆ: ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್‌ ಎಲ್ಲ ಹಕ್ಕು ಹೊಂದಿದೆ ಎಂದು ಪ್ರತಿಪಾದನೆ

ಇಸ್ರೇಲ್‌ಗೆ ಬೆಂಬಲಕ್ಕೆ ನಿಂತ ಅಮೆರಿಕ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ತನ್ನನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಹೊಂದಿರುವ ಇಸ್ರೇಲ್‌ಗೆ ತಮ್ಮ ಬೆಂಬಲ ಇದೆ ಎಂಬುದಾಗಿ ತಿಳಿಸಿದರು’ ಎಂದು ಶ್ವೇತಭವನ ಹೇಳಿದೆ.

‘ಇಸ್ರೇಲ್‌ ಮೇಲೆ ನಡೆಯುತ್ತಿರುವ ರಾಕೆಟ್‌ ದಾಳಿಯನ್ನು ಬೈಡನ್‌ ವಿರೋಧಿಸಿದರು. ಅಲ್ಲದೇ, ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುವಂತೆ ತಿಳಿಸಿದರು’ ಎಂದೂ ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಇಸ್ರೇಲ್‌ನಲ್ಲಿ ಭುಗೆಲೆದ್ದಿರುವ ಕೋಮು ಹಿಂಸಾಚಾರವನ್ನು ತಹಬಂದಿಗೆ ತರುವುದು ಹಾಗೂ ಜೆರುಸಲೇಮ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ನೇತನ್ಯಾಹು ಸರ್ಕಾರ ಕೈಗೊಂಡ ಕ್ರಮಗಳನ್ನು ಬೈಡನ್‌ ಶ್ಲಾಘಿಸಿದರು ಎಂದೂ ತಿಳಿಸಿದೆ.

‘ಕದನವಿರಾಮ ಘೋಷಣೆಗೆ ಅಮೆರಿಕ ಬೆಂಬಲ ನೀಡುತ್ತದೆ. ಈ ನಿಟ್ಟಿನಲ್ಲಿ ಈಜಿಪ್ಟ್‌ನೊಂದಿಗೆ ನಡೆಸಿದ ಮಾತುಕತೆ ಕುರಿತಂತೆಯೂ ಬೈಡನ್‌ ಅವರು ನೇತನ್ಯಾಹುಗೆ ಮಾಹಿತಿ ನೀಡಿದರು’ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು