ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಮಾಲಿನ್ಯ ಮಾಡುವ ರಾಷ್ಟ್ರಗಳಿಗೆ ಬೈಡನ್‌ ಮಣೆ: ಡೊನಾಲ್ಡ್‌ ಟ್ರಂಪ್

ಹವಾಮಾನ ಕುರಿತ‌ ನೀತಿ ವಿನಾಶಕಾರಿ: ಟ್ರಂಪ್‌ ವಾಗ್ದಾಳಿ
Last Updated 9 ಸೆಪ್ಟೆಂಬರ್ 2020, 6:03 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ, ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರ ನೀತಿಗಳು ಅಮೆರಿಕದ ಮಧ್ಯಮ ವರ್ಗದ ಪಾಲಿಗೆ ವಿನಾಶಕಾರಿಯಾಗಿವೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ್ದಾರೆ.

ಫ್ಲಾರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನೀತಿ ಕುರಿತು ಮಾತನಾಡಿದ ಅವರು, ‘ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ವೇತನ ನೀಡಬಲ್ಲ ಉದ್ಯೋಗ ಸೃಷ್ಟಿಗೆ ನನ್ನ ಆಡಳಿತ ಒತ್ತು ನೀಡಿದೆ’ ಎಂದು ಹೇಳಿದರು.

ಪರಿಸರಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತಿರುವ ಚೀನಾ, ರಷ್ಯಾ, ಭಾರತದಂತಹ ರಾಷ್ಟ್ರಗಳಿಗೆ ಆದ್ಯತೆ ನೀಡುವ ಬೈಡನ್‌ ಅವರ ನೀತಿಯಿಂದಾಗಿ ಅಮೆರಿಕ ಬೆಲೆ ತೆರಬೇಕಾಗುತ್ತದೆ ಎಂದೂ ಹೇಳಿದರು.

‘ಈ ರಾಷ್ಟ್ರಗಳಿಂದ ಅಮೆರಿಕದ ಪರಿಸರದ ಮೇಲಾಗುವ ಹಾನಿ ಅಪಾರ. ಆದರೆ, ಹಾನಿ ಈ ದೇಶಗಳಿಂದಾದರೂ ನಮ್ಮ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕಾಗುತ್ತದೆ’ ಎಂದರು.

‘ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂಬುದು ಎಡಪಂಥೀಯ ಪಕ್ಷಗಳ ಕಾರ್ಯಸೂಚಿಯಲ್ಲಿ ಇಲ್ಲ. ಪರಿಸರ ಮಾಲಿನ್ಯ ಮಾಡುವ ಮೂಲಕ ಅಮೆರಿಕಕ್ಕೆ ಹಾನಿ ಮಾಡಬೇಕು ಎಂಬುದೇ ಅವರ ನೀತಿಯಾಗಿದೆ’ ಎಂದೂ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT