ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ರಾಜಕೀಯ ಮಾಡಲು ಬಿಜೆಪಿಗೆ ಅವಕಾಶವಿಲ್ಲ! ಲಂಕಾ ಚುನಾವಣಾ ಆಯೋಗ

Last Updated 16 ಫೆಬ್ರುವರಿ 2021, 9:34 IST
ಅಕ್ಷರ ಗಾತ್ರ

ಕೊಲಂಬೊ: ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಘಟಕ ಸ್ಥಾಪಿಸಲು ಯೋಜಿಸುತ್ತಿದೆ ಎಂಬ ವರದಿಯನ್ನು ಶ್ರೀಲಂಕಾ ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಪುಂಚಿಹೆವಾ ಸೋಮವಾರ ತಳ್ಳಿಹಾಕಿದ್ದಾರೆ. ದೇಶದ ಚುನಾವಣಾ ಕಾನೂನು ಹೊರಗಿನ ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಶ್ರೀಲಂಕಾದ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ವಿದೇಶದಲ್ಲಿರುವ ಯಾವುದೇ ಪಕ್ಷ ಅಥವಾ ಸಂಘಟನೆಯೊಂದಿಗೆ ಬಾಹ್ಯ ಸಂಪರ್ಕ ಹೊಂದಬಹುದು. ಆದರೆ, ಸಾಗರೋತ್ತರ ರಾಜಕೀಯ ಪಕ್ಷಗಳು ನಮ್ಮ ನೆಲದಲ್ಲಿ ಕಾರ್ಯನಿರ್ವಹಿಸಲು ನಮ್ಮ ಚುನಾವಣಾ ಕಾನೂನುಗಳು ಅನುಮತಿ ನೀಡುವುದಿಲ್ಲ,' ಎಂದು ಪುಂಚಿಹೆವಾ ಸುದ್ದಿಗಾರರಿಗೆ ತಿಳಿಸಿದರು.

ಸ್ಪಷ್ಟನೆಗೆ ಕಾರಣವೇನು?

ಶ್ರೀಲಂಕಾ ಮತ್ತು ನೇಪಾಳದಲ್ಲಿ ಬಿಜೆಪಿಯು ತನ್ನ ನೆಲೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ತ್ರಿಪುರ ಮುಖ್ಯಮಂತ್ರಿ ವಿಪ್ಲವ್‌ ಕುಮಾರ್ ದೇವ್‌ ಹೇಳಿದ್ದಾರೆ ಎನ್ನಲಾದ ವರದಿಗಳನ್ನು ಮಾಧ್ಯಮಗಳು ಬಿತ್ತರಿಸಿದ್ದವು. ಇದೇ ಹಿನ್ನೆಲೆಯಲ್ಲಿ ಪುಂಚಿಹೆವಾ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಏನು ಹೇಳಿದ್ದರು ವಿಪ್ಲವ್‌ ದೇವ್‌?

'ಆತ್ಮನಿರ್ಭರ ದಕ್ಷಿಣ ಏಷ್ಯಾ' ಉಪಕ್ರಮದ ಭಾಗವಾಗಿ ದಕ್ಷಿಣ ಏಷ್ಯಾದ ಇತರ ನೆರೆ ರಾಷ್ಟ್ರಗಳಲ್ಲಿ ಬಿಜೆಪಿ ಆಡಳಿತವನ್ನು ಸ್ಥಾಪಿಸುವುದಾಗಿ ಅಮಿತ್‌ ಶಾ ಅವರು ತಾವು ಬಿಜೆಪಿ ಅಧ್ಯಕ್ಷರಾಗಿದ್ದಾಗ ಪಕ್ಷದ ಮುಖಂಡರಿಗೆ ತಿಳಿಸಿದ್ದರು. ಬಿಜೆಪಿಯು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್‌) ಅನ್ನು ಗೌರವಿಸುತ್ತದೆ,' ಎಂದು ದೇವ್‌ ಹೇಳಿದ್ದರು ಎನ್ನಲಾಗಿದ್ದು, ಅದನ್ನು ಮಾಧ್ಯಮಗಳು ವರದಿ ಮಾಡಿದ್ದವು.

ಬಿಜೆಪಿಯಂತಾಗಬೇಕು ಇಲ್ಲವೇ ಚೀನಾದ ಕಮ್ಯುನಿಸ್ಟರಂತಾಗಬೇಕು...!

ಕುತೂಹಲಕಾರಿ ಸಂಗತಿಯೆಂದರೆ, ಶ್ರೀಲಂಕಾ ಅಧ್ಯಕ್ಷ ಗೋಟಭಯ ರಾಜಪಕ್ಸ ಅವರ ಸಹೋದರ ಬೆಸಿಲ್ ರಾಜಪಕ್ಸ ಕಳೆದ ವರ್ಷ ಮಾತನಾಡುತ್ತಾ, ಶ್ರೀಲಂಕಾದ ಆಡಳಿತಾರೂಢ 'ಪುದುಜನ ಪೆರಮುನಾ' ಪಕ್ಷವು ಭಾರತದ ಬಿಜೆಪಿಯಂತಾಗಬೇಕು ಅಥವಾ ಚೀನಾದ ಕಮ್ಯುನಿಸ್ಟ್ ಪಾರ್ಟಿಯಂತೆ ಆಗಬೇಕು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT