ಸಾವೊ ಪೌಲೊ: ಬ್ರೆಜಿಲ್‌ನಲ್ಲಿ ಬಹುತೇಕ ಜನರು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿಲ್ಲ. ಹಾಗಿದ್ದರೂ, ಡೆಲ್ಟಾ ರೂಪಾಂತರ ತಳಿ ಸೋಂಕಿನ ಪ್ರಸರಣ ಭೀತಿಯಲ್ಲಿ ಕೆಲವು ನಗರಗಳಲ್ಲಿ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ನೀಡಲು ಆರಂಭಿಸಲಾಗಿದೆ.
ಪ್ರಸ್ತುತ ರಿಯೊ ಡಿ ಜನೈರೊ ನಗರ ಡೆಲ್ಟಾ ರೂಪಾಂತರ ತಳಿ ಸೋಂಕಿನ ಪ್ರಸರಣದ ಕೇಂದ್ರ ಬಿಂದುವಾಗಿದೆ. ಇಲ್ಲಿ ಹಿರಿಯ ನಾಗರಿಕರ ಸಂಖ್ಯೆ ಅಧಿಕ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರದಿಂದ ಬೂಸ್ಟರ್ ಡೋಸ್‌ಗಳನ್ನು ನೀಡಲಾಗುತ್ತಿದೆ.
ಈಶಾನ್ಯ ನಗರಗಳಾದ ಸಾಲ್ವಡಾರ್ ಮತ್ತು ಸಾವೊ ಲೂಯಿಸ್‌ನಲ್ಲಿ ಸೋಮವಾರದಿಂದಲೇ ಬೂಸ್ಟರ್ ಡೋಸ್‌ಗಳನ್ನು ನೀಡಲಾಗುತ್ತಿದ್ದರೆ, ಅತಿ ಹೆಚ್ಚು ಜನಸಂಖ್ಯೆಯುಳ್ಳ ಸಾವೊ ಪೌಲೊದಲ್ಲಿ ಸೆಪ್ಟೆಂಬರ್ 6ರಿಂದ ಬೂಸ್ಟರ್ ಡೋಸ್ ನೀಡಲಾಗುವುದು. ಮುಂದಿನ ವಾರದಿಂದ ಇತರ ನಗರಗಳಲ್ಲೂ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಫ್ರಾನ್ಸ್, ಇಸ್ರೇಲ್, ಚೀನಾ, ಚಿಲಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹಿರಿಯ ನಾಗರಿಕರಿಗೆ ಬೂಸ್ಟರ್‌ಗಳನ್ನು ನೀಡಲಾಗುತ್ತಿದೆ. ಈ ದೇಶಗಳಲ್ಲಿ ಬಹುತೇಕ ಜನರಿಗೆ ಎರಡು ಡೋಸ್ ಲಸಿಕೆಯನ್ನು ನೀಡಲಾಗಿದೆ. ಆದರೆ ಬ್ರೆಜಿಲ್‌ನಲ್ಲಿ ಶೇಕಡ 30ರಷ್ಟು ಜನರು ಮಾತ್ರ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಅಮೆರಿಕ ಬೂಸ್ಟರ್ ಡೋಸ್‌ಗಳ ಪೂರೈಕೆಯನ್ನುಸೆಪ್ಟೆಂಬರ್ 20ರಿಂದ ಆರಂಭಿಸಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.