ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಬ್ರಿಟನ್‌ನಲ್ಲಿ ಸೋಂಕಿತರಿಗೆ ಪ್ರತಿಕಾಯ ಚಿಕಿತ್ಸೆ

Last Updated 14 ಸೆಪ್ಟೆಂಬರ್ 2020, 16:57 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಾನ್ಸ್‌ ಹಾಪ್‌ಕಿನ್ಸ್‌ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 2,90,59,868 ಆಗಿದೆ.ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ65,26,143 ಆಗಿದ್ದು, ಭಾರತದ ಎರಡನೇ ಸ್ಥಾನದಲ್ಲಿದೆ.ಭಾರತದಲ್ಲಿ ಸೋಂಕಿತರ ಸಂಖ್ಯೆ 48,46,427ಕ್ಕೇರಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 43,30,455 ,ರಷ್ಯಾ- 10,64,438 ಆಗಿದೆ.

ಕೊರೊನಾವೈರಸ್‌ನಿಂದಾಗಿ ಈವರೆಗೆ ಜಗತ್ತಿನ ಮೃತಪಟ್ಟವರ ಸಂಖ್ಯೆ 92,5,084. ಅಮೆರಿಕದಲ್ಲಿ 1.9 ಲಕ್ಷ ಮಂದಿ ಸಾವಿಗೀಡಾಗಿದ್ದು. ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1.31 ಲಕ್ಷಆಗಿದೆ.ಭಾರತದಲ್ಲಿ 79,722 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ಸೋಂಕಿತರಿಗೆ ಪ್ರತಿಕಾಯ ಚಿಕಿತ್ಸೆ
ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ರೋಗಿಗಳ ಮೇಲೆ ಹೊಸ ಪ್ರತಿಕಾಯ ಚಿಕಿತ್ಸೆ ಪ್ರಯೋಗವನ್ನು ಬ್ರಿಟನ್ ಸೋಮವಾರ ಆರಂಭಿಸಿದೆ.ಸರ್ಕಾರದ ಸಹಕಾರದಿಂದ ನಡೆಯುವ ರೇಂಡಮೈಸ್ಡ್ ಇವಾಕ್ಯೇಷನ್ ಆಫ್ ಕೋವಿಡ್-19 ಥೆರಪಿ (RECOVERY) ಪ್ರಯೋಗದಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಿರುವ ಪ್ರತಿಕಾಯ (ಮೊನೋಕ್ಲೋನಲ್ ಆ್ಯಂಟಿಬಾಡಿ)ಯನ್ನು ಮುಂದಿನ ವಾರಗಳಲ್ಲಿ 2,000 ರೋಗಿಗಳಿಗೆ ನೀಡಲಾಗುವುದು.

ನೇಪಾಳದಲ್ಲಿ 55,000 ಗಡಿದಾಟಿದ ಸೋಂಕು ಪ್ರಕರಣ
ನೇಪಾಳದಲ್ಲಿ ಸೋಮವಾರ1,170 ಸೋಂಕು ಪ್ರಕರಣ ವರದಿ ಆಗಿದ್ದು ಪ್ರಕರಣಗಳ ಸಂಖ್ಯೆ 55,000 ದಾಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಲಸಿಕೆ ಚುಚ್ಚುಮದ್ದಿನ ಮೂಲಕ ನೀಡದೆ ಉಸಿರಾಟದ ಮೂಲಕ ಸೇವನೆ ಮಾಡುವಪ್ರಯೋಗ ನಡೆಸಲಿದೆ ಬ್ರಿಟನ್

ಕೋವಿಡ್ ಲಸಿಕೆ ಚುಚ್ಚುಮದ್ದಿನ ಮೂಲಕ ನೀಡುವ ಬದಲು ಉಸಿರಾಟದ ಮೂಲಕ ತೆಗೆದುಕೊಂಡರೆ ಹೆಚ್ಚು ಸಹಕಾರಿ ಆಗಬಹುದೇ? ಎಂಬುದರ ಬಗ್ಗೆ ಬ್ರಿಟನ್ ಪರೀಕ್ಷೆ ನಡೆಸಿದೆ.

ಈ ಬಗ್ಗೆ ಸೋಮವಾರ ಹೇಳಿಕೆ ನೀಡಿದ ಇಂಪೀರಿಯಲ್ ಕಾಲೇಜ್ ಆಫ್ ಲಂಡವನ್ ಮತ್ತು ಆಕ್ಸ್‌ಫರ್ಡ್ ಯುನಿವರ್ಸಿಟಿಯ ಸಂಶೋಧಕರು 30 ಜನರ ಮೇಲೆ ಈ ಪ್ರಯೋಗ ಮಾಡಲಾಗುವುದು. ಈ ಜನರಿಗೆ ಚುಚ್ಚುಮದ್ದಿನ ಮೂಲಕ ಲಸಿಕೆ ನೀಡುವ ಬದಲು ಬಾಯಿಯ ಮೂಲಕ ಹನಿ ಲಸಿಕೆಯನ್ನುಉಚ್ಫಾಸ ಮಾಡಲು ಹೇಳಲಾಗುವುದು. ಹೀಗೆ ಮಾಡಿದರೆ ನೇರವಾಗಿ ಶ್ವಾಸಕೋಶಕ್ಕೆ ತಲುಪುತ್ತದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದು ಬರುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಬ್ರೆಜಿಲ್‌ನಲ್ಲಿ ಕೋವಿಡ್‌–19ನಿಂದಾಗಿ ಕಳೆದ 24 ಗಂಟೆ ಅವಧಿಯುಲ್ಲಿ 415 ಮಂದಿ ಸಾವಿಗೀಡಾಗಿದ್ದು ಹಾಗೂ ಒಂದು ವಾರದಲ್ಲಿ 4 ಸಾವಿರ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಂದು ವಾರದ ಹಿಂದೆ ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1.27 ಲಕ್ಷದ ಆಸುಪಾಸಿನಲ್ಲಿತ್ತು. ಇದೀಗ1,31,625ಕ್ಕೆ ಏರಿಕೆಯಾಗಿದೆ. ಜೊತೆಗೆ ಭಾನುವಾರ ಒಂದೇದಿನ 14,768 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 43,30,455ಕ್ಕೆ ಏರಿಕೆಯಾಗಿದೆ. ಇದರಲ್ಲಿ 35ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ 65 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 65,17,326ಕ್ಕೆ ಏರಿದೆ. ಇದರಲ್ಲಿ24,51,406 ಮಂದಿ ಗುಣಮುಖರಾಗಿದ್ದು,1,94,036 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ತಿಳಿಸಿದೆ.

ವಿವಿಯ ಮಾಹಿತಿ ಪ್ರಕಾರ ಭಾರತದಲ್ಲಿ ಈವರೆಗೆ 47 ಲಕ್ಷ ಪ್ರರಕಣಗಳು ದೃಢಪಟ್ಟಿವೆ. ಇದರಲ್ಲಿ 78,586 ಸೋಂಕಿತರು ಮೃತಪಟ್ಟಿದ್ದು, 37 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ಉಳಿದಂತೆ ರಷ್ಯಾ(1,059,024), ಪೆರು (7,22,832), ಕೊಲಂಬಿಯಾ (7,08,964), ಮೆಕ್ಸಿಕೊ (663,973), ದಕ್ಷಿಣ ಆಫ್ರಿಕಾ (6,49,793),ಸ್ಪೇನ್ (5,66,326) ಮತ್ತು ಅರ್ಜೆಂಟೈನಾದಲ್ಲಿ (5,55,537) ಐದು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕೊರೊನಾವೈರಸ್‌ ಸೋಂಕಿತ ಕೋಶಗಳ ಚಿತ್ರ ಪ್ರಕಟಿಸಿದ ವಿಜ್ಞಾನಿಗಳು
ಉತ್ತರ ಕರೊಲಿನಾ ವಿಶ್ವವಿದ್ಯಾಲಯದ (ಯುಎನ್‌ಸಿ) ಕ್ಯಾಮಿಲ್ಲೆ ಎಹ್ರೆ ಸೇರಿದಂತೆ ಕೆಲವು ಸಂಶೋದಕರ ತಂಡ, ವೈರಾಣು ಗಾಳಿಯಲ್ಲಿ ಹೇಗೆ ಹರಡಬಹುದು ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತಹ ಗ್ರಾಫಿಕ್‌ ಚಿತ್ರಗಳನ್ನುಬಿಡುಗಡೆ ಮಾಡಿದೆ. ಶ್ವಾಸಕೋಶದೊಳಗಿನ ಪ್ರತಿ ಕೋಶದಲ್ಲಿ ಉತ್ಪತ್ತಿಯಾಗುವ ಮತ್ತು ಹೊರಬರುವ ವೈರಸ್ ‌ಕಣಗಳ ಸಂಖ್ಯೆಯನ್ನು ಚಿತ್ರಗಳು ಸುಲಭವಾಗಿ ಅರ್ಥೈಸುತ್ತವೆ. ಜೊತೆಗೆ ಮಾನವನ ಶ್ವಾಸಕೋಶದ ಮೇಲ್ಮೈನಲ್ಲಿರುವ ಹೆಚ್ಚಿನ ಸಂಖ್ಯೆಯ ವೈರಸ್ ಕಣಗಳು, ದೇಹದ ಇತರ ಅಂಗಾಂಶಗಳು ಮತ್ತು ಬೇರೆಯವರಿಗೂ ಸೋಂಕು ಹರಡಲು ಸಿದ್ಧವಾಗಿರುವುದನ್ನೂ ಸ್ಪಷ್ಟಪಡಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT