ಉಕ್ರೇನ್ ಸರ್ಕಾರವನ್ನು ಬದಲಿಸಲು ರಷ್ಯಾ ಪ್ರಯತ್ನಿಸುತ್ತಿದೆ: ಬ್ರಿಟನ್

ಲಂಡನ್: ಉಕ್ರೇನ್ ಸರ್ಕಾರವನ್ನು ಬದಲಿಸಿ ಮಾಸ್ಕೊ ಪರ ಆಡಳಿತವನ್ನು ತರಲು ರಷ್ಯಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಉಕ್ರೇನ್ನ ಮಾಜಿ ಶಾಸಕ ಯೆವ್ಹೆನಿ ಮುರಾಯೆವ್ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸಿದೆ ಎಂದು ಬ್ರಿಟನ್ ಸರ್ಕಾರ ಆರೋಪಿಸಿದೆ.
ಮುರಾಯೆವ್ ರಷ್ಯಾ ಪರ ಸಣ್ಣ ಪಕ್ಷವಾದ ನಾಶಿಯ ಮುಖ್ಯಸ್ಥರಾಗಿದ್ದಾರೆ. ನಾಶಿ ಪಕ್ಷವು ಸದ್ಯ ಉಕ್ರೇನಿನ ಸಂಸತ್ತಿನಲ್ಲಿ ಯಾವುದೇ ಸ್ಥಾನಗಳನ್ನು ಹೊಂದಿಲ್ಲ.
ರಷ್ಯಾದ ಗುಪ್ತಚರ ಸೇವೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿರುವ ಉಕ್ರೇನ್ನ ಹಲವಾರು ರಾಜಕಾರಣಿಗಳನ್ನು ಬ್ರಿಟನ್ ವಿದೇಶಾಂಗ ಕಚೇರಿ ಶನಿವಾರ ಹೆಸರಿಸಿದೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬ್ರಿಟನ್ ಈ ಆರೋಪ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.