ಬುಧವಾರ, ಫೆಬ್ರವರಿ 1, 2023
16 °C

ಎಲ್ಲ ವಿದ್ಯಾರ್ಥಿಗಳು ಗಣಿತ ಓದಲಿ: ಸುನಕ್‌ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌(ಪಿಟಿಐ): 18 ವರ್ಷ ತುಂಬುವವರೆಗೂ ಎಲ್ಲ ವಿದ್ಯಾರ್ಥಿಗಳು ಗಣಿತ ಓದುವ ಕುರಿತು ಪ್ರಧಾನಿ ರಿಷಿ ಸುನಕ್ ಅವರು ಯೋಜನೆಯನ್ನು ರೂಪಿಸಲು ಬಯಸಿದ್ದಾರೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಸುನಕ್‌ ಅವರ 2023ರ ಮೊದಲ ಭಾಷಣವನ್ನು ಪತ್ರಕರ್ತರಿಗೆ ಸಂಕ್ಷಿಪ್ತವಾಗಿ ವಿವರಿಸಲಾಯಿತು. ‘ಸಂಖ್ಯಾಶಾಸ್ತ್ರದ ಕುರಿತು ದೇಶವು ಮರುಚಿಂತನೆ ನಡೆಸಬೇಕು ಎಂದು ಸುನಕ್‌ ಅವರು ತಮ್ಮ ಭಾಷಣದಲ್ಲಿ ಹೇಳಲಿದ್ದಾರೆ’ ಎಂದು ಬಿಬಿಸಿ ವರದಿ ಮಾಡಿದೆ.

‘ಇಂದಿನ ಜಗತ್ತಿನಲ್ಲಿ ದತ್ತಾಂಶವೇ ಎಲ್ಲವೂ ಆಗಿದೆ. ಎಲ್ಲ ಉದ್ಯೋಗವು ದತ್ತಾಂಶವನ್ನು ಆಧರಿಸಿವೆ. ಆದ್ದರಿಂದ ಈ ಹಿಂದಿಗಿಂತಲೂ ವಿಶ್ಲೇಷಣಾತ್ಮಕ ಕೌಶಲವು ನಮ್ಮ ಮಕ್ಕಳಿಗೆ ಈಗ ಹೆಚ್ಚು ಅಗತ್ಯವಾಗಿದೆ’ ಎಂದು ಸುನಕ್‌ ಅವರು ಹೇಳಲಿದ್ದಾರೆ. ಬ್ರಿಟನ್‌ನಲ್ಲಿ 16ರಿಂದ 19 ವರ್ಷದೊಳಗಿನ ಅರ್ಧದಷ್ಟು ಮಕ್ಕಳು ಮಾತ್ರ ಗಣಿತ ಓದುತ್ತಾರೆ ಎಂದು ಸುನಕ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು