ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್‌ ಸೆಂಟರ್‌ ಹಗರಣ: ಭಾರತ ಮೂಲದ ವ್ಯಕ್ತಿಗೆ ಸಜೆ

Last Updated 5 ಜನವರಿ 2023, 14:37 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕಾಲ್‌ ಸೆಂಟರ್‌ ಹಗರಣದಲ್ಲಿ ಭಾಗಿಯಾಗಿದ್ದ ಭಾರತ ಮೂಲದ ವ್ಯಕ್ತಿಗೆ 29 ತಿಂಗಳ ಶಿಕ್ಷೆ ವಿಧಿಸಲಾಗಿದೆ.

ಈ ಹಗರಣದಲ್ಲಿ ಮೋಯಿನ್‌ ಇದ್ರಿಶ್‌ಭಾಯ್‌ ಪಿಂಜಾರ ದೋಷಿ ಎಂದು ನವೆಂಬರ್‌ 30ರಂದು ಸಾಬೀತಾಗಿತ್ತು. ಈ ಹಗರಣದ ಸಂತ್ರಸ್ತರಿಗೆ ₹5.23 ಕೋಟಿ ನೀಡಬೇಕು ಎಂದು ಕೋರ್ಟ್‌ ಆದೇಶಿಸಿದೆ.

2019ರ ಡಿಸೆಂಬರ್‌ನಿಂದ 2020ರ ಜುಲೈವರೆಗೆ ಪಿಂಜಾರ ಭಾರತ ಮೂಲದ ಕಾಲ್‌ ಸೆಂಟರ್‌ನ ಉದ್ಯೋಗಿಯಾಗಿದ್ದ. ಈ ಕಾಲ್‌ಸೆಂಟರ್‌ ಮೂಲಕ ಕರೆ ಮಾಡುವ ಭಾರತೀಯರು ಅಮೆರಿಕ ಪ್ರಜೆಗಳಿಂದ ಹಣ ವಸೂಲಿ ಮಾಡುತ್ತಿದ್ದರು. ನಕಲಿ ಹೆಸರು ಮತ್ತು ಗುರುತು ಬಳಸಿ ಸಂತ್ರಸ್ತರಿಂದ ಬರುವ ಹಣ ಮತ್ತು ಇತರ ವಸ್ತುಗಳನ್ನು ಪಿಂಜಾರ ತೆಗೆದುಕೊಳ್ಳುತ್ತಿದ್ದರು.

ಈ ಜಾಲದಲ್ಲಿ ಅಮೆರಿಕದ ಹಲವರು ಸಂತ್ರಸ್ತರಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT