ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾದಲ್ಲಿ 49.5 ಡಿಗ್ರಿ ಉಷ್ಣಾಂಶ : ಏರಿದ ಧಗೆಗೆ ಕನಿಷ್ಠ 134 ಮಂದಿ ಸಾವು!

Last Updated 30 ಜೂನ್ 2021, 10:55 IST
ಅಕ್ಷರ ಗಾತ್ರ

ವ್ಯಾಂಕೋವರ್‌: ಕೆನಡಾದಲ್ಲಿ ಬಿಸಿಲಿನ ಝಳ ವಿಪರೀತವಾಗಿ ಏರಿಕೆ ಕಂಡಿದ್ದು, ಬುಧವಾರ 49.5 ಡಿಗ್ರಿ ಸೆಲ್ಶಿಯಸ್‌ಗೆ ತಲುಪುವ ಮೂಲಕ ಗರಿಷ್ಠ ಮಟ್ಟ ದಾಖಲಿಸಿದೆ.

ರಾಷ್ಟ್ರದಲ್ಲಿ ಬಿರುಬಿಸಿಲು ಹೆಚ್ಚಾಗಿದ್ದು, ವ್ಯಾಂಕೋವರ್‌ ನಗರದಲ್ಲಿ ಶುಕ್ರವಾರದಿಂದ ಈಚೆಗೆ ಇದ್ದಕ್ಕಿದ್ದಂತೆ ಕನಿಷ್ಠ 134 ಮಂದಿ ಮೃತಪಟ್ಟಿದ್ದಾರೆ ಎಂದು ನಗರ ಪೊಲೀಸ್‌ ಇಲಾಖೆ ಮತ್ತು ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸ್‌ ತಿಳಿಸಿದೆ.

ಬ್ರಿಟಿಷ್‌ ಕೊಲಿಂಬಿಯಾದ ಲಿಟ್ಟನ್‌ನಲ್ಲಿ ಉಷ್ಣಾಂಶವು 49.5 ಡಿಗ್ರಿ ಸೆಲ್ಶಿಯಸ್‌ಗೆ ಏರಿಕೆಯಾಗಿದ್ದು, ಇದುವರೆಗಿನ ಗರಿಷ್ಠ ತಾಪಮಾನ ಇದಾಗಿದೆ ಎಂದು ಕೆನಡಾದ ಹವಾಮಾನ ಇಲಾಖೆ ವರದಿ ಮಾಡಿದೆ.

ವ್ಯಾಂಕೋವರ್‌ನಲ್ಲಿ ಇದುವರೆಗೆ ಇಷ್ಟು ತಾಪಮಾನ ಏರಿಕೆಯಾಗಿರಲಿಲ್ಲ. ಇಷ್ಟೊಂದು ಕೆಟ್ಟ ಅನುಭವ ಯಾವತ್ತೂ ಆಗಿರಲಿಲ್ಲ. ಇಂತಹ ಉಷ್ಣಾಂಶವನ್ನು ನೋಡಿಯೇ ಇಲ್ಲ. ಸಾಕಷ್ಟು ಮಂದಿ ಬಿಸಿಲಿನ ತಾಪಕ್ಕೆ ಇದ್ದಕ್ಕಿದ್ದಂತೆ ಮೃತರಾಗುತ್ತಿರುವುದು ಬೇಸರವನ್ನುಂಟು ಮಾಡಿದೆ ಎಂದು ಪೊಲೀಸರು, ಸ್ಥಳೀಯರು ತಿಳಿಸಿದ್ದಾರೆ.

ಜಾಗತಿಕವಾಗಿ ದಶಕದಲ್ಲಿ 2019 ಅತ್ಯಂತ ಹೆಚ್ಚು ಉಷ್ಣಾಂಶ ಹೊಂದಿದ್ದ ವರ್ಷ ಎಂದು ಗುರುತಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ತಾಪಮಾನವು ಗಣನೀಯ ಏರಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT