ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಮಗು ಪಡೆಯಲು ಚೀನಾದಲ್ಲಿ ಕಾನೂನುಬದ್ಧ ಅವಕಾಶ

Last Updated 21 ಆಗಸ್ಟ್ 2021, 14:41 IST
ಅಕ್ಷರ ಗಾತ್ರ

ಬೀಜಿಂಗ್‌: ದೇಶದಲ್ಲಿ ಜನಸಂಖ್ಯೆಯ ಬಿಕ್ಕಟ್ಟನ್ನು ನಿವಾರಿಸಲು ಚೀನಾ ಈಗ ದಂಪತಿಗೆ ಮೂರನೇ ಮಗುವನ್ನು ಪಡೆಯಲು ಕಾನೂನುಬದ್ಧವಾಗಿ ಅವಕಾಶ ಕಲ್ಪಿಸಿದೆ.

ಈ ಹಿಂದೆ ಇದ್ದ ಜನಸಂಖ್ಯೆ ಮತ್ತು ಕುಟುಂಬ ಕಲ್ಯಾಣ ಯೋಜನೆ ಕಾನೂನಿಗೆಕಮ್ಯುನಿಸ್ಟ್ ಪಕ್ಷದ ದಶಕಗಳ ಪ್ರಯತ್ನದ ಭಾಗವಾಗಿ ಶುಕ್ರವಾರ ತಿದ್ದುಪಡಿ ತಂದಿರುವ ಚೀನಾ ಸರ್ಕಾರ, ಮೂರನೆ ಮಗುವಿಗೆ ಜನ್ಮ ನೀಡಲು ಇದ್ದ ಕಾನೂನು ತೊಡಕುಗಳನ್ನು ನಿವಾರಿಸಿದೆ.

1980ರ ದಶಕದಿಂದ ಚೀನಾ ಹೆಚ್ಚಿನ ದಂಪತಿಗಳನ್ನು ಒಂದು ಮಗುವಿಗೆ ಕಟ್ಟುನಿಟ್ಟಾಗಿ ಸೀಮಿತಗೊಳಿಸಿತು. ದಂಡ ತೆರುವ ಅಥವಾ ಉದ್ಯೋಗ ಕಳೆದುಕೊಳ್ಳುವ ಬೆದರಿಕೆಯೊಂದಿಗೆ ಜಾರಿಗೊಳಿಸಿದ ಈ ನೀತಿಯು, ಬಲವಂತದ ಗರ್ಭಪಾತ ಸೇರಿ ಹಲವು ದುರುಪಯೋಗಕ್ಕೆ ಕಾರಣವಾಗಿತ್ತು. ಗಂಡು ಮಕ್ಕಳಿಗೆ ಆದ್ಯತೆ ನೀಡುವ ಪೋಷಕರಿಂದ ಹೆಣ್ಣು ಭ್ರೂಣಗಳ ಹತ್ಯೆ ನಡೆಯುತ್ತಿತ್ತು. ಇದರಿಂದ ಲಿಂಗ ಅನುಪಾತದಲ್ಲಿ ಭಾರೀ ಅಸಮತೋಲನಕ್ಕೂ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT