ಬೀಜಿಂಗ್: ಕೋವಿಡ್ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲಾಗದೆ ಬೀಜಿಂಗ್ನಲ್ಲೇ ಉಳಿದಿರುವ ಸಾವಿರಾರು ಭಾರತೀಯರಿಗೆ ವೀಸಾ ನಿರ್ಬಂಧ ಹೇರಿರುವ ತನ್ನ ಕ್ರಮವನ್ನು ಚೀನಾ ಸಮರ್ಥಿಸಿಕೊಂಡಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಈ ಕ್ರಮ ಸೂಕ್ತವಾಗಿದೆ. ಇದರಲ್ಲಿ ಕೇವಲ ಭಾರತೀಯರನ್ನಷ್ಟೇ ಗುರಿಮಾಡಲಾಗಿಲ್ಲ. ವಿದೇಶಗಳಲ್ಲಿರುವ ಚೀನಾದ ಜನರು ವಾಪಸ್ ಬರಲು ಬರಲು ಸಹ ಇದೇ ನಿಯಮ ಅನ್ವಯವಾಗಲಿದೆ ಎಂದು ಎಂದು ಅದು ಹೇಳಿದೆ.

ಚೀನಾದ ದೀರ್ಘಕಾಲದ ಪ್ರಯಾಣ ನಿರ್ಬಂಧಗಳ ಕುರಿತಾಗಿ ಬೀಜಿಂಗ್ನ ಭಾರತೀಯ ರಾಯಭಾರಿ ವಿಕ್ರಮ್ ಮಿಶ್ಶ್ರಿ ಟೀಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನಿಂಗ್, ಮುಂದಿನ ದಿನಗಳಲ್ಲಿ ನಿರ್ಬಂಧಗಳನ್ನು ಸಡಿಲಿಸುವ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ.

ಕಳೆದ ವಾರ, ಚೀನಾ-ಭಾರತ ಸಂಬಂಧಗಳ ಕುರಿತಾದ ಟ್ರ್ಯಾಕ್- II ಸಂವಾದದ ಸಂದರ್ಭ ಮಿಶ್ರಿ, ತಮ್ಮ ಭಾಷಣದಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದ ಚೀನಾದಲ್ಲಿ ಸಿಲುಕಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಭಾರತಕ್ಕೆ ಹಿಂದಿರುಗಲು ಚೀನಾ ಅವಕಾಶ ನೀಡದಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದರು.

ಸಂಪೂರ್ಣವಾಗಿ ಮಾನವೀಯ ಸಮಸ್ಯೆಗೆ ‘ಅವೈಜ್ಞಾನಿಕ ವಿಧಾನ’ವನ್ನು ಚೀನಾ ಬಳಸಿದೆ ಎಂದು ಟೀಕಿಸಿದ್ದರು. ಆದರೆ, ಚೀನಾ ಈ ಆರೋಪಗಳನ್ನು ತಳ್ಳಿಹಾಕಿದೆ.

‘ಚೀನಾದ ಕ್ರಮಗಳು ಸೂಕ್ತವಾಗಿವೆ ಮತ್ತು ಎಲ್ಲಾ ಒಳಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ನಿಯಮ ಅನ್ವಯಿಸುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ’ಎಂದು ಹುವಾ ಚುನಿಂಗ್ ಹೇಳಿದರು.

ವಿದೇಶದಿಂದ ಹಿಂದಿರುಗುವ ಚೀನೀ ನಾಗರಿಕರಿಗೂ ಪ್ರಯಾಣ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಹುವಾ ಹೇಳಿದರು.

ಚೀನಾದ ಕಾಲೇಜುಗಳಲ್ಲಿ ಓದುತ್ತಿರುವ 23,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಲ್ಲದೆ, ಬಹುತೇಕ ವೈದ್ಯಕೀಯ, ನೂರಾರು ಉದ್ಯಮಿಗಳು, ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಕಳೆದ ವರ್ಷದಿಂದ ಅಲ್ಲಿ ಸಿಲುಕಿಕೊಂಡಿದ್ದಾರೆ.

ನಿರ್ಬಂಧಗಳಿಂದಾಗಿ ಹಲವರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದು, ಕೆಲವರಿಗೆ ವ್ಯಾಪಾರದಲ್ಲಿ ನಷ್ಟವುಂಟಾಗುತ್ತಿದೆ. ಮತ್ತೆ ಕೆಲವರು ಕುಟುಂಬಗಳಿಂದ ಬೇರ್ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.