ಬೀಜಿಂಗ್: ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿದ್ದ ಕಠಿಣ ಕ್ರಮಗಳಪೈಕಿ ಕೆಲವು ನಿಯಮಗಳನ್ನು ಚೀನಾ ಸಡಿಲಿಸಿದೆ. ಹೊಸ ತಳಿಗಳು ದುರ್ಬಲವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಜನರು ಮನೆಯಲ್ಲೇ ಬಂಧಿಯಾಗಿರುವಂತೆ ಮಾಡಿರುವ ‘ಶೂನ್ಯ ಕೋವಿಡ್’ ನಿಯಮಾವಳಿಗಳು ಎಂದಿಗೆ ಕೊನೆಗೊಳ್ಳುತ್ತವೆ ಎಂಬುದನ್ನು ಅಧಿಕಾರಿಗಳು ಇನ್ನೂ ಹೇಳಿಲ್ಲ.ಸೋಮವಾರ ಬೀಜಿಂಗ್ ಸೇರಿದಂತೆ 16 ನಗರಗಳಲ್ಲಿ ಲಾಕ್‌ಡೌನ್ ತೆರವುಗೊಳಿಸಲಾಗಿದ್ದು, ಬಸ್ ಸಂಚಾರ ಆರಂಭವಾಗಿದೆ. ಕಳೆದ 48 ಗಂಟೆಗಳಿಂದ ಯಾವುದೇ ಕೋವಿಡ್ ಪರೀಕ್ಷೆಗೆ ಒಳಪಡದೆ ಜನ ಓಡಾಡುವಂತಾಗಿದೆ.

ಕಳೆದ ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಪರೀಕ್ಷೆ ಇಲ್ಲದೇ ಜನ ಓಡಾಡುತ್ತಿದ್ದಾರೆ. ಚೀನಾದ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಈ ವರೆಗೆ ಇದ್ದ ಕೋವಿಡ್ ಪರೀಕ್ಷೆಯ ನಿಯಮಗಳನ್ನು ಡಿಸೆಂಬರ್ 6ರಿಂದ ತೆಗೆದುಹಾಕಲಾಗುತ್ತಿದೆ.

ಚೀನಾದಲ್ಲಿ ಯಾವುದೇ ಲಕ್ಷಣ ಇಲ್ಲದ 25,696 ಜನರನ್ನೂ ಸೇರಿದಂತೆ 30,014 ಹೊಸ ಪ್ರಕರಣಗಳುಸೋಮವಾರ ಪತ್ತೆಯಾಗಿವೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಕಳೆದ ವಾರ ಒಂದೇ ದಿನ 40,000 ಪ್ರಕರಣಗಳು ವರದಿಯಾಗಿದ್ದವು. ಈವರೆಗೆ ಚೀನಾದಲ್ಲಿ ಕೋವಿಡ್‌ನಿಂದಾಗಿ 5,235 ಸಾವು ವರದಿಯಾಗಿದೆ.

ಕಳೆದ ತಿಂಗಳು ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಕಠಿಣ ಕೋವಿಡ್ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಕಠಿಣ ನಿರ್ಬಂಧಗಳಿಂದ ಬೇಸತ್ತಿದ್ದ ಜನ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ವಿರುದ್ಧ ಪ್ರತಿಭಟನೆಗಳನ್ನು ಮಾಡಿ, ಷಿ ಜಿನ್‌ಪಿಂಗ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂಬ ಒತ್ತಡ ಹೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.