ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಮೇಲೆ ಯಶಸ್ವಿಯಾಗಿ ಇಳಿದ ಚೀನಾದ ರೋವರ್‌

Last Updated 15 ಮೇ 2021, 6:19 IST
ಅಕ್ಷರ ಗಾತ್ರ

ಬಿಜೀಂಗ್‌: ಚೀನಾದ ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದಿದೆ. ಈ ಮೂಲಕ ಚೀನಾವು ಮಂಗಳ ಗ್ರಹದಲ್ಲಿ ತನ್ನ ರೋವರ್‌ ಅನ್ನು ಇಳಿಸಿದ ಎರಡನೇ ರಾಷ್ಟ್ರ ಎನಿಸಿಕೊಂಡಿದೆ (ಮೊದಲ ದೇಶ ಅಮೆರಿಕ) ಎಂದು ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.

‘ಮೊದಲೇ ಆಯ್ಕೆ ಮಾಡಲಾಗಿದ್ದ ಮಂಗಳ ಗ್ರಹದ ದಕ್ಷಿಣ ‌ಪ್ರದೇಶದಲ್ಲಿ ಚೀನಾದ ‘ಜುರಾಂಗ್’ ರೋವರ್ ಅನ್ನು ಇಳಿಸಲಾಯಿತು’ ಎಂದುಕ್ಸಿನುವಾ ಸುದ್ದಿ ಸಂಸ್ಥೆ ವರದಿಯಲ್ಲಿ ಹೇಳಿದೆ.

ಸೌರಶಕ್ತಿ ಚಾಲಿತ ಆರು ಚಕ್ರಗಳ ಜುರಾಂಗ್‌ ರೋವರ್‌ 240 ಕಿ.ಗ್ರಾಂ ತೂಕವನ್ನು ಹೊಂದಿದೆ. ಇದರಲ್ಲಿ ಆರು ವೈಜ್ಞಾನಿಕ ಸಾಧನಗಳನ್ನು ಅಳವಡಿಸಲಾಗಿದೆ.

ಲ್ಯಾಂಡರ್‌ ಸಹಾಯದಿಂದ ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಹುಡುಕುವ ಮೂರು ತಿಂಗಳ ಮಿಷನ್‌ಗೆ ಈ ರೋವರ್‌ ಅನ್ನು ನಿಯೋಜಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಬಾಹ್ಯಾಕಾಶದಲ್ಲಿ 9 ನಿಮಿಷಗಳ ಕಾಲ ಕಠಿಣ ಪರಿಸ್ಥಿತಿಯನ್ನು ಎದುರಿಸಿದ ರೋವರ್‌ ಮಂಗಳ ಗ್ರಹದಲ್ಲಿ ಯಶಸ್ವಿಯಾಗಿ ಇಳಿದಿದೆ’ ಎಂದು ಚೀನಾ ರಾಷ್ಟ್ರೀಯ ಅಂತರಿಕ್ಷ ಆಡಳಿತವು (ಸಿಎನ್‌ಸಿಎ) ತಿಳಿಸಿದೆ.

ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ ಅನ್ನು ಒಳಗೊಂಡ ‘ಟಿಯಾನ್‌ವೆನ್‌–1’ ಅನ್ನು 2020ರ ಜುಲೈ 23ರಂದು ಉಡಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT