ಬೀಜಿಂಗ್ : ಭಾರತದ ವೃತ್ತಿಪರರು ಮತ್ತು ಅವರ ಕುಟುಂಬ ಸದಸ್ಯರಿಗೆ ವೀಸಾ ನೀಡುವ ನಿರ್ಧಾರವನ್ನು ಚೀನಾ ಪ್ರಕಟಿಸಿದೆ. ಕೋವಿಡ್ ನಿರ್ಬಂಧದ ಕಾರಣ ಎರಡು ವರ್ಷದಿಂದ ವೀಸಾ ನೀಡುವುದನ್ನು ಚೀನಾ ಸ್ಥಗಿತಗೊಳಿಸಿತ್ತು.
ಇನ್ನೊಂದೆಡೆ ಚೀನಾದ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಮರು ಸೇರ್ಪಡೆಗೆ ಆಸಕ್ತಿ ತೋರಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯನ್ನು ಚೀನಾ ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿನ ಚೀನಾ ರಾಯಭಾರಿ ಅವರು ವೀಸಾ ನೀಡುವುದಕ್ಕೆ ಸಂಬಂಧಿಸಿದ ಕೋವಿಡ್ ಮಾರ್ಗಸೂಚಿಯ ವಿವರ ಪ್ರಕಟಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.