ಬೀಜಿಂಗ್: ಮಾನವ ಹಕ್ಕುಗಳ ರಕ್ಷಣೆಯಲ್ಲಿ ಯಾರೂ ಪರಿಪೂರ್ಣರಲ್ಲ. ಈ ಕುರಿತು ನಮಗೆ ಉಪದೇಶ ನೀಡುವ ಅಗತ್ಯವೂ ಇಲ್ಲ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಬುಧವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದ ಹೈಕಮಿಷನರ್ ಮಿಚೆಲ್ ಬಚೆಲೆಟ್ ಅವರಿಗೆ ತಿಳಿಸಿದ್ದಾರೆ.

ಈ ಮೂಲಕ ಉಯಿಗರ್ ಮುಸ್ಲಿಮರ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆ ಆರೋಪವನ್ನು ತಳ್ಳಿಹಾಕಿದ್ದಾರೆ.

ಇಸ್ಲಾಮಿಕ್ ಭಯೋತ್ಪಾದನೆ ನಿಗ್ರಹಿಸುವ ಭಾಗವಾಗಿ ಲಕ್ಷಾಂತರ ಉಯಿಗರ್ ಮುಸ್ಲಿಮರನ್ನು ಬಂಧಿಸಿರುವ ಆರೋಪ ಸಂಬಂಧ ತನಿಖೆ ನಡೆಸುವಂತೆ ಚೀನಾದೊಂದಿಗಿನ ಮಾತುಕತೆ ನನೆಗುದಿಗೆ ಬಿದ್ದಿದೆ. ಈ ಬೆನ್ನಲ್ಲೇಬುಧವಾರ ಬುಚೆಲೆಟ್ ಅವರೊಂದಿಗೆ ವಿಡಿಯೊ ಲಿಂಕ್ ಮೂಲಕ ಮಾತುಕತೆ ನಡೆಸಿದ ಷಿ ಜಿನ್‌ಪಿಂಗ್, ಮಾನವ ಹಕ್ಕುಗಳ ರಕ್ಷಣೆಗೆ ಚೀನಾ ಬದ್ಧವಾಗಿದೆ. ಮಾನವ ಹಕ್ಕುಗಳ ವಿಷಯದಲ್ಲಿ ನಿಷ್ಕಳಂಕ ದೇಶ ಎಂಬುದೇ ಇಲ್ಲ. ಈ ಕುರಿತು ನಮಗೆ ಉಪದೇಶ ಮಾಡುವ ಅಗತ್ಯ ಇಲ್ಲ. ಕುಂಟು ನೆಪದಲ್ಲಿ ಒಂದು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.