ಭಾನುವಾರ, ಜೂನ್ 20, 2021
28 °C
ಮುಂದಿನ ವರ್ಷದಿಂದ ಚೀನಾ ಜನಸಂಖ್ಯೆ ಇಳಿಕೆ

ಚೀನಾದ ಜನಸಂಖ್ಯಾ ಬೆಳವಣಿಗೆ; 2020ರಲ್ಲಿ ಶೂನ್ಯದ ಸಮೀಪ

ಎಪಿ Updated:

ಅಕ್ಷರ ಗಾತ್ರ : | |

Prajavani

ಬಿಜೀಂಗ್‌: ಚೀನಾದಲ್ಲಿ ಜನಸಂಖ್ಯಾ ಏರಿಕೆ ಪ್ರಮಾಣ ಕಳೆದ ವರ್ಷ 0.53ರಷ್ಟು ಏರಿಕೆಯನ್ನಷ್ಟೇ ಕಂಡಿದ್ದು, ಮುಂದಿನ ವರ್ಷದಿಂದ ಜನಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇದೆ.

2019ರಲ್ಲಿ ಚೀನಾದ ಜನಸಂಖ್ಯೆ 140 ಕೋಟಿ ಇತ್ತು. 2020ರಲ್ಲಿ ಅದು 141.17 ಕೋಟಿಗೆ ಹೆಚ್ಚಳವಾಗಿದೆ. ಈ ಸ್ಥಿತಿ ಮುಂದುವರಿದರೆ ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯ ರಾಷ್ಟ್ರದಲ್ಲಿ ಮುಂದಿನ ವರ್ಷದಿಂದ ದೊಡ್ಡ ಪ್ರಮಾಣದ ಕಾರ್ಮಿಕರ ಕೊರತೆ ಹಾಗೂ ಬಳಕೆದಾರರ ಕೊರತೆ ಎದುರಾಗುವ ಅಪಾಯ ಇದೆ.

ಚೀನಾವು ಮಂಗಳವಾರ ಬಿಡುಗಡೆ ಮಾಡಿದ 7ನೇ ರಾಷ್ಟ್ರೀಯ ಜನಗಣತಿ ವರದಿಯಲ್ಲಿ ಇದನ್ನು ತಿಳಿಸಲಾಗಿದ್ದು, ದೇಶದ ಎಲ್ಲಾ 31 ಪ್ರಾಂತ್ಯಗಳು, ಸ್ವಾಯತ್ತ ಪ್ರದೇಶಗಳು ಮತ್ತು ಪುರಸಭೆಗಳ ಜನಸಂಖ್ಯಾ ವಿವರ ಇದರಲ್ಲಿದೆ. ಹಾಂಕಾಂಗ್‌ ಮತ್ತು ಮಕಾವೊಗಳ ಜನಸಂಖ್ಯಾ ವಿವರ ಇದರಲ್ಲಿಲ್ಲ.

ದೇಶದಲ್ಲಿರುವ 60 ವರ್ಷ ಮೇಲ್ಪಟ್ಟವರ ಸಂಖ್ಯೆ 26 ಕೋಟಿಗೆ ಹೆಚ್ಚಳವಾಗಿದೆ. 15ರಿಂದ 59 ವರ್ಷದೊಳಗಿನವರ ಸಂಖ್ಯೆ 89.4 ಕೋಟಿ ಇದ್ದು, 2010ಕ್ಕೆ ಹೋಲಿಸಿದರೆ ಶೇ 6.79ರಷ್ಟು ಕಡಿಮೆಯಾಗಿದೆ. ಚೀನಾದ ನಗರ ಪ್ರದೇಶಗಳಲ್ಲಿ 90 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 50 ಕೋಟಿ ಜನರಿದ್ದಾರೆ.

ಚೀನಾದಲ್ಲಿ 1982ರಲ್ಲಿ ಗರಿಷ್ಠ ಜನಸಂಖ್ಯೆ ದಾಖಲಾಗಿತ್ತು. ಆಗ ಇದ್ದ ಜನಸಂಖ್ಯಾ ಪ್ರಗತಿ ಪ್ರಮಾಣ ಶೇ 2.1 ರಷ್ಟಾಗಿತ್ತು. ಕಟ್ಟುನಿಟ್ಟಿನ ಜನಸಂಖ್ಯಾ ನಿಯಂತ್ರಣ ಕ್ರಮಗಳಿಂದಾಗಿ ಬಳಿಕ ಅಲ್ಲಿನ ಜನಸಂಖ್ಯೆ ಶೇಕಡಾವಾರು ಇಳಿಕೆಯ ಹಾದಿಯಲ್ಲಿದೆ.‌

ಜನಸಂಖ್ಯೆ ಗಂಭೀರ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದನ್ನು ಮನಗಂಡು 2016ರಲ್ಲಿ ಒಂದೇ ಮಗು ನಿಯಮ ಸಡಿಲಿಸಿ, ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಲಾಗಿತ್ತು. ಆದರೆ ಅದು ಹೆಚ್ಚಿನ ಫಲ ಕೊಟ್ಟಿಲ್ಲ ಎಂಬುದನ್ನು ಈಗಿನ ಅಂಕಿ ಅಂಶಗಳು ತಿಳಿಸುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು