ಶನಿವಾರ, ಮೇ 28, 2022
31 °C

ಅರುಣಾಚಲ ಪ್ರದೇಶವು ತನ್ನ ಅಂತರ್ಗತ ಭಾಗ: ಚೀನಾ ಸಮರ್ಥನೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್: ಭಾರತದ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರುಗಳ ಮರುನಾಮಕರಣವನ್ನು ಶುಕ್ರವಾರ ಸಮರ್ಥಿಸಿಕೊಂಡಿರುವ ಚೀನಾ, ಟಿಬೆಟ್‌ನ ದಕ್ಷಿಣ ಭಾಗವು (ಅರುಣಾಚಲ ಪ್ರದೇಶ) ತನ್ನ ಭೂಪ್ರದೇಶದ ‘ಅಂತರ್ಗತ ಭಾಗ’ ಎಂದು ಪ್ರತಿಪಾದಿಸಿದೆ.

ಅರುಣಾಚಲಪ್ರದೇಶದ 15 ಸ್ಥಳಗಳನ್ನು ಮರುನಾಮಕರಣ ಮಾಡಿರುವ ಚೀನಾದ ಕ್ರಮವನ್ನು ಗುರುವಾರ ಬಲವಾಗಿ ತಿರಸ್ಕರಿಸಿದ್ದ ಭಾರತ, ‘ಅರುಣಾಚಲಪ್ರದೇಶ ರಾಜ್ಯವು ಯಾವಾಗಲೂ ಭಾರತದೊಂದಿಗೆ ಇತ್ತು ಮತ್ತು ಅದು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಹೆಸರುಗಳನ್ನು ಮರುನಾಮಕಾರಣ ಮಾಡಿದ ಮಾತ್ರಕ್ಕೆ ಸತ್ಯವನ್ನು ಬದಲಾಯಿಸಲಾಗದು’ ಎಂದೂ ಪ್ರತಿಪಾದಿಸಿತ್ತು.

ಭಾರತದ ಸಮರ್ಥನೆ ಮತ್ತು ಪ್ರತಿಪಾದನೆಯ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಅವರು, ‘ಟಿಬೆಟ್‌ನ ದಕ್ಷಿಣ ಭಾಗವು ಅರ್ಥಾತ್ ಅರುಣಾಚಲಪ್ರದೇಶವು ಟಿಬೆಟ್‌ ಸ್ವಾಯತ್ತ ಪ್ರದೇಶವಾದ ಚಿನ್‌ಗೆ ಸೇರಿದೆ ಮತ್ತು ಚೀನಾದ ಅಂತರ್ಗತ ಪ್ರದೇಶವಾಗಿದೆ’ ಎಂದಿದ್ದಾರೆ.

‘ವಿವಿಧ ಜನಾಂಗೀಯ ಗುಂಪುಗಳ ಜನರು ಅನೇಕ ವರ್ಷಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಆ ಪ್ರದೇಶಗಳಿಗೆ ಅನೇಕ ಹೆಸರುಗಳನ್ನು ನೀಡಿದ್ದಾರೆ.  ಚೀನಾದ ಅಧಿಕಾರಿಗಳು ಸಂಬಂಧಿತ ಪ್ರದೇಶಕ್ಕೆ ನಿಯಮಗಳಿಗೆ ಅನುಸಾರವಾಗಿ ಹೆಸರುಗಳನ್ನು ಪ್ರಕಟಿಸಿದ್ದಾರೆ. ಇವುಗಳು ಚೀನಾದ ಸಾರ್ವಭೌಮತ್ವದ ಒಳಗಿನ ವಿಷಯಗಳಾಗಿವೆ’ ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆರು ಸ್ಥಳಗಳ  ಹೆಸರುಗಳನ್ನು ಚೀನಾವು 2017ರಲ್ಲಿ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಅರುಣಾಚಲಪ್ರದೇಶದ ಸ್ಥಳಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ... ಜ.12 ರಂದು ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ: ಪೊಂಗಲ್‌ ಆಚರಣೆಯಲ್ಲಿ ಭಾಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು