ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್ ಸುತ್ತ ಚೀನಾದ 71 ಯುದ್ಧ ವಿಮಾನಗಳು, 7 ಹಡಗುಗಳ ತಾಲೀಮು

Last Updated 27 ಡಿಸೆಂಬರ್ 2022, 3:52 IST
ಅಕ್ಷರ ಗಾತ್ರ

ತೈಪೆ: ವಾರಾಂತ್ಯದ ಮಿಲಿಟರಿ ತಾಲೀಮಿನಲ್ಲಿ ತೈವಾನ್ ಸುತ್ತ ಚೀನಾ 71 ಯುದ್ಧ ವಿಮಾನಗಳು, ಹತ್ತಾರು ಫೈಟರ್ ಜೆಟ್‌ಗಳು ಮತ್ತು 7 ಹಡಗುಗಳನ್ನು ನಿಯೋಜಿಸಿದೆ ಎಂದು ತೈಪೆಯ ರಕ್ಷಣಾ ಇಲಾಖೆ ತಿಳಿಸಿದೆ.

ಅಮೆರಿಕ ಮತ್ತು ತೈವಾನ್‌ನ ಅನಿರ್ದಿಷ್ಟ ಪ್ರಚೋದನೆಗಳಿಗೆ ಪ್ರತಿಯಾಗಿ ಭಾನುವಾರ ಯುದ್ಧ ತಾಲೀಮು ನಡೆಸಲಾಗಿದೆ ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಹೇಳಿದೆ.

ತೈವಾನ್‌ನ ರಕ್ಷಣಾ ಇಲಾಖೆಯ ಡೇಟಾ ಪ್ರಕಾರ, ಈವರೆಗೆ ಚೀನಾ ನಡೆಸಿರುವ ದೈನಂದಿನ ತಾಲೀಮುಗಳಿಗಿಂತಲೂ ಇದು ಹೆಚ್ಚು ದೊಡ್ಡದಾದ ಮತ್ತು ಆಕ್ರಮಣಕಾರಿಯಾಗಿದೆ.

ಚೀನಾದ ಅತ್ಯಾಧುನಿಕ 6 ಎಸ್‌ಯು–30ಯುದ್ಧ ವಿಮಾನಗಳು ಸೇರಿ ಒಟ್ಟು 60 ಫೈಟರ್ ಜೆಟ್‌ಗಳು ತಾಲೀಮಿನಲ್ಲಿದ್ದವು ಎಂದು ತೈವಾನ್ ಟ್ವೀಟ್‌ ಮೂಲಕ ತಿಳಿಸಿದೆ.

ಈ ಪೈಕಿ 47 ವಿಮಾನಗಳು ದ್ವೀಪ ರಾಷ್ಟ್ರದ ವಾಯು ರಕ್ಷಣಾ ವಲಯವನ್ನು ದಾಟಿ ಬಂದಿದ್ದವು ಎಂದು ಅದು ಹೇಳಿದೆ.

ತೈವಾನ್ ಅನ್ನು ತನ್ನದೇ ಭೂಪ್ರದೇಶ ಎಂದು ಹೇಳಿಕೊಳ್ಳುವ ಚೀನಾದಿಂದ ಯಾವುದೇ ಸಂದರ್ಭ ಆಕ್ರಮಣ ಎದುರಾಗುವ ಆತಂಕ ಇದೆ.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವಧಿಯಲ್ಲಿ ಚೀನಾ–ತೈವಾನ್ ಸಂಬಂಧ ಹದಗೆಟ್ಟಿದ್ದು, ತೈವಾನ್ ಮೇಲೆ ಚೀನಾ ಮಿಲಿಟರಿ, ರಾಜತಾಂತ್ರಿಕ ಮತ್ತು ಆರ್ಥಿಕ ಒತ್ತಡವನ್ನು ಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT