ಚೀನಾ: ಮೂರು ಸೂಕ್ಷ್ಮ ಸಂವೇದಿ ಉಪಗ್ರಹಗಳ ಯಶಸ್ವಿ ಉಡಾವಣೆ

ಬೀಜಿಂಗ್: ಚೀನಾದ ನೈರುತ್ಯ ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಮೂರು ಸೂಕ್ಷ್ಮಸಂವೇದಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
‘ಯಾವೋಗನ್ -35’ ಸರಣಿಗೆ ಸೇರಿದ ಈ ಉಪಗ್ರಹಗಳನ್ನು ‘ಲಾಂಗ್ ಮಾರ್ಚ್ -2 ಡಿ ಕ್ಯಾರಿಯರ್ ರಾಕೆಟ್‘ ಮೂಲಕ ಉಡಾವಣೆ ಮಾಡಲಾಯಿತು. ಈ ಉಪಗ್ರಹಗಳು ಯೋಜಿತ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿವೆ‘ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಲಾಂಗ್ ಮಾರ್ಚ್ ಸರಣಿಯ ಕ್ಯಾರಿಯರ್ ರಾಕೆಟ್‌ಗಳ ಮೂಲಕ ನೆರವೇರಿಸಿದ 396ನೇ ಉಡಾವಣೆ ಇದಾಗಿದೆ.
2019ರ ಮಾರ್ಚ್‌ನಲ್ಲಿ ಈ ಸರಣಿಯ ‘ಲಾಂಗ್ ಮಾರ್ಚ್ 3 ಬಿ ರಾಕೆಟ್’ ಹೊಸ ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ 300ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.