ಶನಿವಾರ, ಜುಲೈ 2, 2022
20 °C

ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲಿರುವ ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಚೀನಾವು ಮೂರು ಪುರುಷ ಗಗನಯಾತ್ರಿಗಳನ್ನು ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವುದಾಗಿ ಸೋಮವಾರ ಹೇಳಿದೆ.

‘ಚೀನಾವು ಸರಕು ಸಾಗಣೆ ಬಾಹ್ಯಾಕಾಶ ನೌಕೆ ಟಿಯಾನುಜ್‌–2 ಅನ್ನು ಶನಿವಾರ ಉಡಾವಣೆ ಮಾಡಿತ್ತು. ಈ ನೌಕೆಯು ಬಾಹ್ಯಾಕಾಶದ ನಿಲ್ದಾಣದ ಘಟಕವಾದ ‘ತಿಯಾನ್ಹೆ’ಯಲ್ಲಿ  ಉಪಕರಣ ಮತ್ತು ಸಾಮಾಗ್ರಿಗಳನ್ನು ಯಶಸ್ವಿಯಾಗಿ ತಲುಪಿಸಿದೆ’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಏಜೆನ್ಸಿ (ಸಿಎಂಸಿಎ) ತಿಳಿಸಿದೆ.

ಇದರ ಬೆನ್ನಲ್ಲೇ ‘ಟಿಯಾಂಗಾಂಗ್‌’ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲು ಚೀನಾ ನಿರ್ಧರಿಸಿದೆ. ಈ ಗಗನಯಾತ್ರಿಗಳು ಮೂರು ತಿಂಗಳುಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ.

‘ಜೂನ್‌ ತಿಂಗಳಲ್ಲಿ ಶೆನ್‌ಶಾವ್‌–12 ಗಗನನೌಕೆಯಲ್ಲಿ ಈ ಮೂವರು ಗಗನಯಾತ್ರಿಗಳು ಟಿಯಾಂಗಾಂಗ್‌ನತ್ತ ಪ್ರಯಾಣಿಸಲಿದ್ದಾರೆ. ಅವರು ಅಲ್ಲಿ ಹಲವು ಟಾಸ್ಕ್‌, ರಿಪೇರಿ, ನಿರ್ವಹಣೆ ಕಾರ್ಯಗಳು ಸೇರಿದಂತೆ ಇತರೆ ವೈಜ್ಞಾನಿಕ ಕೆಲಸಗಳನ್ನು ಮಾಡಲಿದ್ದಾರೆ. ಸದ್ಯ ಈ ಮೂವರು ಎರಡನೇ ಹಂತದ ಕ್ವಾರಂಟೈನಲ್ಲಿದ್ದಾರೆ’ ಎಂದು ಸಿಎಂಸಿಎ ನಿರ್ದೇಶಕ ಯಾಂಗ್‌ ಲಿವೇ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು