ಭಾನುವಾರ, ಆಗಸ್ಟ್ 14, 2022
28 °C

ಕೋವಿಡ್ ಪಿಡುಗಿನ ಮೂಲ: ಅಮೆರಿಕ–ಚೀನಾ ಜಟಾಪಟಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಕೊರೊನಾ ವೈರಸ್‌ ಮೂಲವನ್ನು ಪತ್ತೆ ಮಾಡುವ ವಿಚಾರವನ್ನು ಅಮೆರಿಕ ರಾಜಕೀಯಗೊಳಿಸುತ್ತಿದೆ ಎಂದು ಚೀನಾ ಟೀಕಿಸಿದೆ. ಅಲ್ಲದೇ, ಇತರ ವಿಷಯವಾಗಿ ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಅಮೆರಿಕಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ಚೀನಾದ ಹಿರಿಯ ವಿದೇಶಾಂಗ ನೀತಿ ಸಲಹೆಗಾರ ಯಾಂಗ್ ಜಿಯೆಚಿ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ನಡುವೆ ಶುಕ್ರವಾರ ನಡೆದ ದೂರವಾಣಿ ಮಾತುಕತೆ ವೇಳೆ, ಈ ವಿಷಯವಾಗಿ ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ಹೇಳಿವೆ.

ಹಲವಾರು ವಿವಾದಾತ್ಮಕ ವಿಷಯಗಳನ್ನು ಬ್ಲಿಂಕೆನ್‌ ಮಾತುಕತೆ ವೇಳೆ ಪ್ರಸ್ತಾಪಿಸಿದರು. ಪ್ರಜಾಪ್ರಭುತ್ವ ಪರ ಹೋರಾಡುವವರನ್ನು ಹಾಂಗ್‌ಕಾಂಗ್‌ನಲ್ಲಿ ದಮನಿಸಲಾಗುತ್ತಿದೆ. ಲಕ್ಷಾಂತರ ಜನ ಮುಸ್ಲಿಮರನ್ನು ಷಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಬಂಧನ ಕೇಂದ್ರಗಳಲ್ಲಿರಿಸಲಾಗಿದೆ ಎಂಬುದನ್ನು ಈ ವೇಳೆ ಪ್ರಸ್ತಾಪಿಸಲಾಯಿತು ಎಂದೂ ಮೂಲಗಳು ತಿಳಿಸಿವೆ.

'ಕೋವಿಡ್‌–19 ಪಿಡುಗಿಗೆ ಕಾರಣವಾದ ಸಾರ್ಸ್‌–ಕೋವ್‌–2 ವೈರಸ್‌ನ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ಮೊದಲ ಬಾರಿಗೆ ವುಹಾನ್‌ನ  ಪ್ರಯೋಗಾಲಯದಲ್ಲಿ ಪತ್ತೆಯಾದ ಈ ವೈರಸ್‌, ಅಲ್ಲಿಂದ ಸೋರಿಕೆಯಾಗಿರುವ ಸಾಧ್ಯತೆ ಇದೆ‘ ಎಂಬುದು ಅಮೆರಿಕದ ವಾದವಾಗಿದೆ.

ವುಹಾನ್ ಪ್ರಯೋಗಾಲಯದಿಂದಲೇ ‌ ವೈರಸ್ ಸೋರಿಕೆಯಾಗಿದೆ ಎಂದು ಅಮೆರಿಕದ ಕೆಲವರು ‘ಅಸಂಬದ್ಧ ಕಥೆ‘ಗಳನ್ನು ಹೆಣೆದಿದ್ದಾರೆ. ಈ ಬಗ್ಗೆ ಚೀನಾ ತೀವ್ರ ಕಳವಳಗೊಂಡಿದೆ‘ ಎಂದು ಯಾಂಗ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು