ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಆಕ್ರಮಣಶೀಲ ವರ್ತನೆಯಿಂದ ಬಿಕ್ಕಟ್ಟು ಸೃಷ್ಟಿ: ಲಾಯ್ಡ್‌ ಆಸ್ಟಿನ್‌

Last Updated 11 ಜೂನ್ 2021, 6:36 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾದ ಆಕ್ರಮಣಶೀಲ ವರ್ತನೆಯಿಂದಾಗಿ ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಹೇಳಿದ್ದಾರೆ.

ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಾರ್ಷಿಕ ಬಜೆಟ್‌ ಕುರಿತ ಚರ್ಚೆ ವೇಳೆ, ಸೆನೆಟ್‌ನ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಚೀನಾ ಸತತವಾಗಿ ಸವಾಲೊಡ್ಡುವ ರಾಷ್ಟ್ರವಾಗಿದೆ. ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ಸೃಷ್ಟಿಸುವ ಬಿಕ್ಕಟ್ಟು ಕಳವಳಕಾರಿ’ ಎಂದು ಹೇಳಿದರು.

‘ಸಂಭಾವ್ಯ ಬಿಕ್ಕಟ್ಟಿನ ಕುರಿತು ನಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಬೇಕು. ಇದಕ್ಕಾಗಿ ಅಮೆರಿಕದ ಮಿಲಿಟರಿ ಹಾಗೂ ಸರ್ಕಾರಿ ಅಧಿಕಾರಿಗಳ ನಡುವೆ ನೇರ ಸಂವಹನ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ವಿಶ್ವದಲ್ಲಿಯೇ ಪ್ರಮುಖ, ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕು ಎಂಬ ಹೆಬ್ಬಯಕೆಯನ್ನು ಚೀನಾ ಹೊಂದಿದೆ. ಈ ಉದ್ದೇಶ ಈಡೇರಿಕೆಗಾಗಿ ಚೀನಾ ನಮ್ಮೊಂದಿಗೆ ಕೇವಲ ಮಿಲಿಟರಿ ವಿಷಯವಾಗಿ ಮಾತ್ರವಲ್ಲ ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಲು ಹವಣಿಸುತ್ತದೆ’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT