ಗುರುವಾರ , ಮೇ 13, 2021
44 °C

ಆ್ಯಂಟ್‌ ಸಮೂಹದಿಂದ ಹೊರನಡೆಯಲಿದ್ದಾರೆಯೇ ಜಾಕ್‌ ಮಾ?

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಹಾಂಗ್‌ಕಾಂಗ್‌: ಆ್ಯಂಟ್‌ ಸಮೂಹವು ತನ್ನ ಸಂಸ್ಥಾಪಕ ಜಾಕ್ ಮಾ ಅವರಿಗೆ ಸಮೂಹದಿಂದ ಹೊರನಡೆಯಲು, ತಮ್ಮ ಷೇರುಗಳನ್ನು ಮಾರಾಟ ಮಾಡಲು, ಕಂಪನಿಯ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಲು ಮಾರ್ಗಗಳನ್ನು ಅರಸುತ್ತಿದೆ!

ಪೀಪಲ್ಸ್‌ ಬ್ಯಾಂಕ್ ಆಫ್‌ ಚೀನಾ (ಪಿಬಿಒಸಿ) ಹಾಗೂ ಚೀನಾ ಬ್ಯಾಂಕಿಂಗ್‌ ಮತ್ತು ವಿಮಾ ನಿಯಂತ್ರಣ ಆಯೋಗದ (ಸಿಬಿಐಆರ್‌ಸಿ) ಅಧಿಕಾರಿಗಳು ಮಾ ಹಾಗೂ ಆ್ಯಂಟ್ ಕಂಪನಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಮಾ ಅವರನ್ನು ಕಂಪನಿಯಿಂದ ಹೊರಗೆ ಕಳುಹಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಮಾ ಅವರು ಹೊಂದಿರುವ ಷೇರುಪಾಲನ್ನು ಅವರಿಂದ ಹಿಂದಕ್ಕೆ ಪಡೆಯವ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಆ್ಯಂಟ್ ಸಮೂಹ ಪ್ರತಿಕ್ರಿಯೆ ನೀಡಿದೆ. ‘ಮಾ ಅವರು ಹೊಂದಿರುವ ಷೇರುಗಳನ್ನು ಕಂಪನಿಯ ಹಾಲಿ ಹೂಡಿಕೆದಾರರಿಗೇ ಮಾರಾಟ ಮಾಡಬಹುದು ಎಂಬುದು ಕಂಪನಿ ಹೊಂದಿರುವ ಭರವಸೆ’ ಎಂದು ಮೂಲವೊಂದು ಹೇಳಿದೆ.

‘ಮಾ ಅವರಿಗೆ ತಮ್ಮ ಷೇರುಗಳನ್ನು ಆಪ್ತರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಅವರು ತಮ್ಮ ಷೇರುಗಳನ್ನು ಸರ್ಕಾರದ ಜೊತೆ ಗುರುತಿಸಿಕೊಂಡ ಚೀನಾದ ಹೂಡಿಕೆದಾರರೊಬ್ಬರಿಗೆ ವರ್ಗಾವಣೆ ಮಾಡಬಹುದು. ಮಾ ಅವರು ಕಂಪನಿಯಿಂದ ಸಂಪೂರ್ಣವಾಗಿ ಹೊರನಡೆಯಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ’ ಎಂದು ಇನ್ನೊಂದು ಮೂಲ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು