ಮಂಗಳವಾರ, ಏಪ್ರಿಲ್ 20, 2021
32 °C

ವಿದ್ಯುತ್‌ ಗ್ರಿಡ್‌ ಮೇಲೆ ಚೀನಾ ದಾಳಿ: ಭಾರತದ ಪರ ನಿಲ್ಲಲು ಅಮೆರಿಕ ಸಂಸದರ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತೀಯ ವಿದ್ಯುತ್ ಗ್ರಿಡ್ ವ್ಯವಸ್ಥೆಯ ಮೇಲೆ ಚೀನೀಯರು ಸೈಬರ್ ದಾಳಿ ನಡೆಸುತ್ತಿರುವ ವಿಚಾರದಲ್ಲಿ ಅಮೆರಿಕ ಭಾರತದ ಪರವಾಗಿ ನಿಲ್ಲಬೇಕು ಎಂದು ಸಂಸತ್ ಸದಸ್ಯ ಫ್ರಾಂಕ್ ಪಲ್ಲೋನ್ ಸೋಮವಾರ ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.

‘ನಮ್ಮ ದೇಶದ ಕಾರ್ಯತಂತ್ರದ ಪಾಲುದಾರರಾಗಿರುವವರ ಪರ ಅಮೆರಿಕ ನಿಲ್ಲಬೇಕು. ಚೀನಿಯರ ಈ ನಡೆಯಿಂದ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು ವಿದ್ಯುತ್ ವ್ಯತ್ಯಯದಿಂದಾಗಿ ಜನರೇಟರ್‌ ಅವಲಂಬಿಸಬೇಕಾಗಿದೆ. ಭಾರತದ ವಿದ್ಯುತ್‌ ಗ್ರಿಡ್‌ ಮೇಲಿನ ಚೀನಾದ ಅಪಾಯಕಾರಿ ಸೈಬರ್ ದಾಳಿಯನ್ನು ಖಂಡಿಸಬೇಕು‘ ಎಂದು ಫ್ರಾಂಕ್‌ ಪಲ್ಲೋನ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಬಲ ಮತ್ತು ಬೆದರಿಕೆಯ ಮೂಲಕ ಈ ಪ್ರದೇಶದಲ್ಲಿ ಚೀನಾ ಬಲಗೊಳ್ಳಲು ನಾವು ಬಿಡುವುದಿಲ್ಲ‘ ಎಂದು ಪಲ್ಲೋನ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಚೀನಾ ಹ್ಯಾಕರ್‌ಗಳನ್ನು ಬಳಸಿಕೊಂಡು ಬೇರೆ ಬೇರೆ ದೇಶಗಳು ಅಂತರ್ಜಾಲವನ್ನು ಹೇಗೆ ಬಳಸುತ್ತವೆ ಎಂಬ ಬಗ್ಗೆ ಅಧ್ಯಯನ ನಡೆಸಿರುವ ಅಮೆರಿಕದ ಮೆಸಾಚುಸೆಟ್ಸ್‌ನ ‘ರೆಕಾರ್ಡೆಡ್‌ ಫ್ಯೂಚರ್‌’ ಎಂಬ ಕಂಪನಿ, ಭಾರತದ ಮೇಲೆ ಚೀನೀಯರು ಸೈಬರ್ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ವರದಿ ಬಿಡುಗಡೆ ಮಾಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು