ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ಚೀನಾದ ಅವಿಭಾಜ್ಯ ಭಾಗ, ಮುಂದೊಂದು ದಿನ ತಾಯ್ನಾಡಿನ ಮಡಿಲು ಸೇರಲಿದೆ: ಚೀನಾ

Last Updated 7 ಮಾರ್ಚ್ 2022, 12:29 IST
ಅಕ್ಷರ ಗಾತ್ರ

ಬೀಜಿಂಗ್‌: ತೈವಾನ್ ಚೀನಾದ ಅವಿಭಾಜ್ಯ ಅಂಗ. ಅಂತಿಮವಾಗಿ ಅದು ತಾಯ್ನಾಡಿನ ಮಡಿಲು ಸೇರಲಿದೆ,’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ರಷ್ಯಾದ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿರುವ ಉಕ್ರೇನಿಯನ್ನರು ತೈವಾನ್ ಜನರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ತೈವಾನ್‌ ವಿದೇಶಾಂಗ ಸಚಿವ ‘ಜೋಸೆಫ್‌ ವು’ ಹೇಳಿದ್ದರು. ಆ ಮೂಲಕ ವೈರಿ ರಾಷ್ಟ್ರ ಚೀನಾಗೆ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿರುವ ಚೀನಾ, ‘ತೈವಾನ್‌ ಮುಂದೊಂದು ದಿನ ಚೀನಾದ ಮಡಿಲು ಸೇರಲೇಬೇಕು’ ಎಂದು ಹೇಳಿದೆ.

ಚೀನಾವನ್ನು ನಿಯಂತ್ರಿಸುವ ಸಲುವಾಗಿ ಅಮೆರಿಕದಲ್ಲಿರುವ ಕೆಲವು ಶಕ್ತಿಗಳು ‘ಸ್ವತಂತ್ರ ತೈವಾನ್‌’ನ’ ಪ್ರತಿಪಾದಕರನ್ನು ಬೆಂಬಲಿಸುತ್ತಿವೆ. ಆ ಮೂಲಕ ಚೀನಾಕ್ಕೆ ಸವಾಲು ಹಾಕಲಾಗುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

‘ಚೀನಾವನ್ನು ನಿಯಂತ್ರಿಸಲು ತೈವಾನ್ ಅನ್ನು ಬಳಸುವ ಪ್ರಯತ್ನಗಳು ವಿಫಲಗೊಳ್ಳುತ್ತವೆ’ ಎಂದು ಸಚಿವ ವಾಂಗ್ ಯಿ ಹೇಳಿದ್ದಾರೆ.

‘ಅಮೆರಿಕದ ಒತ್ತಡದ ನಡುವೆಯೂ ಚೀನಾ ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಚೀನಾ ಸಿದ್ಧವಾಗಿದೆ’ ಎಂದು ವಾಂಗ್ ಹೇಳಿದರು.

ತೈವಾನ್‌ಗೆ ಅಮೆರಿಕದ ಶಸ್ತ್ರಾಸ್ತ್ರ ಪೂರೈಕೆ ವಿರುದ್ಧ ಕೆಂಗಣ್ಣು ಬೀರಿದ್ದ ಚೀನಾ, ಅಮೆರಿಕದ ಶಸ್ತ್ರಾಸ್ತ್ರ ತಯಾರಕ ಸಂಸ್ಥೆಗಳಾದ ‘ಲಾಕ್‌ಹೀಡ್ ಮಾರ್ಟಿನ್’ ಮತ್ತು ‘ರೇಥಿಯಾನ್ ಟೆಕ್ನಾಲಜೀಸ್’ ಸಂಸ್ಥೆಗಳನ್ನು ಗುರಿಯಾಗಿಸಿ ನಿರ್ಬಂಧಗಳನ್ನು ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT