ಮಂಗಳವಾರ, ಜೂನ್ 22, 2021
27 °C

ಕೋವಿಡ್–19 ವಿರುದ್ಧ ಹೋರಾಟ: ಭಾರತಕ್ಕೆ ನೆರವು ನೀಡಲು ಸಿದ್ಧ ಎಂದ ಚೀನಾ

ಪಿಟಿಐ‌ Updated:

ಅಕ್ಷರ ಗಾತ್ರ : | |

Chinese President Xi Jinping. Credit: Reuters Photo

ಬೀಜಿಂಗ್: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡಲು ಸಿದ್ಧ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಂದೇಶ ಕಳುಹಿಸಿದ್ದಾರೆ.

ಭಾರತದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೋಕ ಸಂದೇಶ ಕಳುಹಿಸಿರುವ ಜಿನ್‌ಪಿಂಗ್, ನೆರವು ನೀಡಲು ಸಿದ್ಧ ಎಂದು ತಿಳಿಸಿರುವುದಾಗಿ ಚೀನಾದ ಸರ್ಕಾರಿ ಸುದ್ದಿಸಂಸ್ಥೆ ‘ಕ್ಸಿನುವಾ’ ವರದಿ ಮಾಡಿದೆ.

ಓದಿ: 

ಭಾರತದೊಂದಿಗೆ ಸಾಂಕ್ರಾಮಿಕದ ವಿರುದ್ಧದ ಸಹಕಾರ ಬಲಪಡಿಸಲು ಚೀನಾ ಸಿದ್ಧವಿದೆ. ಬೆಂಬಲ ಮತ್ತು ಸಹಾಯ ನೀಡಲು ಸಿದ್ಧವಿದೆ ಎಂದು ಸಂದೇಶದಲ್ಲಿ ಜಿನ್‌ಪಿಂಗ್ ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಹೆಚ್ಚಿನ ನೆರವನ್ನು ನೀಡಲಾಗುವುದು. ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಚೀನಾದಲ್ಲಿ ತಯಾರಾಗುವ ಉಪಕರಣಗಳು ಬೇಗನೆ ಭಾರತ ತಲುಪಲಿವೆ ಎಂದು ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಗುರುವಾರ ಹೇಳಿದ್ದರು.

ಭಾರತ ಎದುರಿಸುತ್ತಿರುವ ಸವಾಲುಗಳಿಗೆ ಚೀನಾವು ಪ್ರಾಮಾಣಿಕ ಸಹಾನುಭೂತಿ ವ್ಯಕ್ತಪಡಿಸುತ್ತಿದೆ ಎಂದೂ ಅವರು ವಿದೇಶಾಂಬ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಓದಿ: 

‘ಕೊರೊನಾ ವೈರಸ್ ಮನುಕುಲದ ಶತ್ರು. ಇದರ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಸಾಂಕ್ರಾಮಿಕದ ಹೋರಾಟದಲ್ಲಿ ಚೀನಾವು ಭಾರತ ಮತ್ತು ಅಲ್ಲಿನ ಜನರನ್ನು ದೃಢವಾಗಿ ಬೆಂಬಲಿಸುತ್ತದೆ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು