ಗುರುವಾರ , ಆಗಸ್ಟ್ 11, 2022
20 °C

ಅಮೆರಿಕ: ನ್ಯೂಯಾರ್ಕ್‌ ನಗರದ ಶಾಲೆಗಳು ಪುನರಾರಂಭ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿರುವುದರಿಂದ ಸೋಮವಾರದಿಂದ ನ್ಯೂಯಾರ್ಕ್‌ ನಗರದಲ್ಲಿ  ಶಾಲೆಗಳನ್ನು ಪುನರಾರಂಭಿಸಲಾಗಿದೆ.

ಶಿಶುವಿಹಾರದಿಂದ ಐದನೇ ತರಗತಿಯ ಮಕ್ಕಳಿಗಾಗಿ ಮತ್ತೆ ಶಾಲೆಗಳನ್ನು ತೆರೆಯಲಾಗಿದೆ. ಪೋಷಕರು  ಆನ್‌ಲೈನ್ ತರಗತಿಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ವಿಶೇಷ ಶಿಕ್ಷಣ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ ಗುರುವಾರದಿಂದ ತರಗತಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ರಜಾದಿನಗಳ ಬಳಿಕ ಪುನರಾರಂಭಿಸಲಾಗುವುದು. ಅಲ್ಲಿಯವರೆಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುವುದು ಎಂದು ಮೇಯರ್‌ ಬಿಲ್‌ ಡೆ ಬ್ಲಾಸಿಯೋ ಮಾಹಿತಿ ನೀಡಿದ್ದಾರೆ.

ಈ ಹಿಂದೆ ನಗರದಲ್ಲಿ ಸತತ ಏಳು ದಿನಗಳ ಕಾಲ ಶೇಕಡ 3 ರಷ್ಟು ಪ್ರಕರಣಗಳು ವರದಿಯಾದ ಕಾರಣ ಶಾಲೆಗಳನ್ನು ಮುಚ್ಚುವಂತೆ ಮೇಯರ್‌ ಬಿಲ್‌ ಡೆ ಬ್ಲಾಸಿಯೋ ನವೆಂಬರ್‌ 18ರಂದು ಆದೇಶ ನೀಡಿದ್ದರು. ಈಗ ಶೇಕಡ 5 ರಷ್ಟು ಪ್ರಕರಣಗಳು ವರದಿಯಾಗಿವೆ. ಆದರೂ, ಶಾಲೆಗಳನ್ನು ಮರು ಆರಂಭಿಸಲು ಯಾವುದೇ ತೊಂದರೆ ಇಲ್ಲ. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬ್ಲಾಸಿಯೋ ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು