ಮಂಗಳವಾರ, ಮೇ 11, 2021
27 °C

ಕೋವಿಡ್-‌19: ಶುಭ ‌ಕೋರಿದ ಎಲ್ಲರಿಗೂ ಧನ್ಯವಾದ ಹೇಳಿದ ಪಾಕ್‌ ಪ್ರಧಾನಿ ಇಮ್ರಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಕೋವಿಡ್-‌19 ದೃಢಪಟ್ಟಿರುವುದರಿಂದ ಪ್ರತ್ಯೇಕವಾಸದಲ್ಲಿ ಉಳಿದು ಚಿಕಿತ್ಸೆ ಪಡೆಯುತ್ತಿರುವ‌ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ತಾವು ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಇಮ್ರಾನ್‌, ʼನಾನು ಮತ್ತು ದೇಶದ ಪ್ರಥಮ ಮಹಿಳೆ, ಕೋವಿಡ್‌-‌19ನಿಂದ ಚೇತರಿಸಿಕೊಳ್ಳಲೆಂದು ಪಾಕಿಸ್ತಾನ ಹಾಗೂ ವಿದೇಶಗಳಿಂದ ಶುಭಾಶಯ ಕೋರಿದ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆʼ ಎಂದು ತಿಳಿಸಿದ್ದಾರೆ.

ಇಮ್ರಾನ್‌ ಖಾನ್‌ ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶುಭಾಶಯ ಕೋರಿದ್ದರು.

ಚೀನಾ ಅಭಿವೃದ್ಧಿಪಡಿಸಿರುವ ಸಿನೋಫಾರ್ಮ್‌ ಲಸಿಕೆಯ ಮೊದಲ ಡೋಸ್‌ ಪಡೆದ ಎರಡು ದಿನಗಳ ಬಳಿಕ (ಶನಿವಾರ) ಇಮ್ರಾನ್‌ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಇಮ್ರಾನ್‌ ಅವರ ಪತ್ನಿ ಬುಷ್ರಾ ಬಿದಿ ಅವರಿಗೂ ಕೋವಿಡ್‌ ದೃಢಪಟ್ಟಿದೆ.

ಪಾಕಿಸ್ತಾನದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 13,843ಕ್ಕೆ ತಲುಪಿದೆ. ಭಾನುವಾರ ಹೊಸದಾಗಿ 3,677 ಜನರಿಗೆ ಸೋಂಕು ತಗುಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು