ದುಬೈ: ಸಮುದಾಯದಲ್ಲಿ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ಹೆಚ್ಚಾದರೆ, ಸಮಶೀತೋಷ್ಣ ಹೊಂದಿರುವ ರಾಷ್ಟ್ರಗಳಲ್ಲಿಕೊರೊನಾ ವೈರಸ್, ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ (ಸೀಸನಲ್ ವೈರಸ್) ವೈರಸ್‌ಗಳಾಗಬಹುದು. ಅಲ್ಲಿವರೆಗೂ ಎಲ್ಲ ಕಾಲದಲ್ಲೂಕೊರೊನಾ ವೈರಸ್ ಸೋಂಕು ಹರಡುತ್ತಲೇ ಇರುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಈ ಹೊಸ ಅಧ್ಯಯನ ಪ್ರಬಂಧ ಜರ್ನಲ್ ಫ್ರಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಮುದಾಯದಲ್ಲಿರುವ ಬಹುಪಾಲು ಜನರಲ್ಲಿ ಕೊರೊನಾ ವೈರಸ್ ಎದುರಿಸುವಂತಹ ರೋಗನಿರೋಧಕ ಶಕ್ತಿ ಉತ್ಪತ್ತಿಯಾದರೆ, ಸೋಂಕು ಹರಡುವ ಪ್ರಮಾಣವೂ ಗಣನೀಯವಾಗಿ ಕ್ಷೀಣಿಸಬಹುದು. ಈ ಮೂಲಕ ಕೊರೊನಾ ವೈರಸ್ ವಾತಾವರಣದ ಏರಿಳಿತಗಳಿಗೆ ಅನುಗುಣವಾಗಿಸೀಸನಲ್ ವೈರಸ್ ಆಗಿ ಉಳಿದುಕೊಳ್ಳಬಹುದು ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

'ಹರ್ಡ್ ಇಮ್ಯುನಿಟಿ ಹೆಚ್ಚಾಗುವವರೆಗೂ ಕೊರೊನಾ ವೈರಸ್ ಸೋಂಕು ವರ್ಷ ಪೂರ್ತಿ ಹರಡುತ್ತಿರುತ್ತದೆ. ಹಾಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲ ರೀತಿಯ ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು ಹಾಗೂ ಶುಚಿತ್ವ ಕಾಪಾಡಿಕೊಳ್ಳುವಂತಹ ಕ್ರಮಗಳನ್ನು ಪಾಲಿಸುವ ಮೂಲಕ ಕೊರೊನಾ ಸೋಂಕಿನೊಂದಿಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ಈ ಅಧ್ಯಯನದ ಹಿರಿಯ ಲೇಖಕ ಲೆಬನಾನ್ ಬೈರೂತ್ ಅಮೆರಿಕನ್ ವಿಶ್ವವಿದ್ಯಾಲಯದ ಹಸನ್ ಝರಕೆತ್ ಹೇಳಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಸಮುದಾಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವ ಹೊತ್ತಿಗೆ ಬಹು ಅಲೆಗಳಲ್ಲಿ ಕೊರೊನಾ ಸೋಂಕು ಬಾಧಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.