ಭಾನುವಾರ, ಏಪ್ರಿಲ್ 11, 2021
29 °C

Covid-19 World Update: ಬ್ರೆಜಿಲ್‌ನಲ್ಲಿ ಒಂದೇ ದಿನ 1,086 ಸೋಂಕಿತರ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸಾವೊ ಪಾಲೊ: ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿರುವ  ಬ್ರೆಜಿಲ್‌ನಲ್ಲಿ ಭಾನುವಾರ ಒಂದೇದಿನ ಬರೋಬ್ಬರಿ 1,086 ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 2,65,411ಕ್ಕೆ ತಲುಪಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಬ್ರೆಜಿಲ್‌ನಲ್ಲಿ ಈವರೆಗೆ ಒಟ್ಟು 1,10,19,344 ಪ್ರಕರಣಗಳು ವರದಿಯಾಗಿವೆ.

ಹೆಚ್ಚು ಮಾರಕ ಹಾಗೂ ವೇಗವಾಗಿ ಸೋಂಕು ಹರಡಬಲ್ಲ ರೂಪಾಂತರ ವೈರಾಣುವಿನಿಂದ ಆರಂಭವಾಗಿರುವ ಎರಡನೇ ಅಲೆಯಿಂದಾಗಿ ಬ್ರೆಜಿಲ್‌ನಲ್ಲಿ ಆಸ್ಪತ್ರೆಗಳು ನಲುಗಿವೆ. ಮ್ಯಾಟೊ ಗ್ರೊಸ್ಸೊ, ಸಂತಾ ಕ್ಯಾಥರಿನಾ, ಪರಾನ ಮತ್ತು ರಿಯೊ ಗ್ರಾಂಡೆಗಳಲ್ಲಿನ ಆಸ್ಪತ್ರೆಗಳಲ್ಲಿ  ತೀವ್ರ ನಿಗಾ ಘಟಕಗಳು (ಐಸಿಯು) ಶೇ. 100 ರಷ್ಟು ಭರ್ತಿಯಾಗಿವೆ. ಮತ್ತಷ್ಟು ರೋಗಿಗಳು ಹಾಸಿಗೆಗಳಿಗಾಗಿ ಕಾಯತ್ತಿದ್ದಾರೆ. ಹೀಗಾಗಿ ಈ ರಾಜ್ಯಗಳ ಸರ್ಕಾರಗಳು ತಮ್ಮ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕರಿಸುವಂತೆ ಇತರ ರಾಜ್ಯಗಳಿಗೆ ಮನವಿ ಮಾಡಿವೆ ಎಂದು ವರದಿಯಾಗಿವೆ.

ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಾವೊ ಪಾಲೊ ರಾಜ್ಯವು, ತನ್ನಲ್ಲಿರುವ ಸ್ಥಳೀಯ ಆಸ್ಪತ್ರೆಗಳು ಶೇ. 80 ರಷ್ಟು ಭರ್ತಿಯಾಗಿವೆ. ರಾಜ್ಯ ರಾಜಧಾನಿಯಲ್ಲಿ ಮತ್ತಷ್ಟು ಆಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ಈಗಾಗಲೇ ಘೋಷಿಸಿದೆ. ರೂಪಾಂತರಿ ವೈರಾಣು ಕಾಣಿಸಿಕೊಂಡ ಬಳಿಕ ಬ್ರೆಜಿಲ್‌ನಲ್ಲಿ ಪ್ರಕರಣಗಳು ಏರಿಕೆಯಾಗುತ್ತಿವೆ. ಹಲವು ರಾಜ್ಯಗಳು ಅತ್ಯಂತ ಅಗತ್ಯವಲ್ಲದ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿವೆ.

11.74 ಕೋಟಿ ಸೋಂಕು ಪ್ರಕರಣ
ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 11.74 ಕೋಟಿ (11,74,49,512) ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಪೈಕಿ 9.29 ಕೋಟಿ (92,964,061) ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 26 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 2.18 ಕೋಟಿ ಸೋಂಕಿತರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚು ಪ್ರಕರಣಗಳು ಹಾಗೂ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಈವರೆಗೆ ಒಟ್ಟು 29.6 ಕೋಟಿ ಪ್ರಕರಣಗಳು ವರದಿಯಾಗಿವೆ. 5.37 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ದೇಶದಲ್ಲಿ ಇನ್ನೂ 88 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ ಒಟ್ಟು 1.12 ಕೋಟಿ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1.57 ಲಕ್ಷ ಸೋಂಕಿತರು ಮೃತಪಟ್ಟಿದ್ದು, 1.08 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ. 1.88 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಉಳಿದಂತೆ ರಷ್ಯಾದಲ್ಲಿ 3,21,758, ಇಂಗ್ಲೆಂಡ್‌ನಲ್ಲಿ 8,94,454, ಫ್ರಾನ್ಸ್‌ನಲ್ಲಿ 35,50,364, ಸ್ಪೇನ್‌ನಲ್ಲಿ 3,33,210, ಇಟಲಿಯಲ್ಲಿ 4,72,862 ಪ್ರಕರಣಗಳು ಸಕ್ರಿಯವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು