ಶುಕ್ರವಾರ, ಮೇ 14, 2021
30 °C

Covid-19 World Update: 6.69 ಲಕ್ಷ ಹೊಸ ಪ್ರಕರಣ, ಹತ್ತು ಸಾವಿರ ಸೋಂಕಿತರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಪ್ರಪಂಚದಾದ್ಯಂತ ಸೋಮವಾರ ಒಂದೇ ದಿನ ಬರೋಬ್ಬರಿ 6,69,689 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 10,478 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15.4 ಕೋಟಿಗೆ (15,41,75,226) ಏರಿಕೆಯಾಗಿದ್ದು, ಸಾವಿನ ಸಂಖ್ಯೆ 32.26 ಲಕ್ಷಕ್ಕೆ (3,226,743) ತಲುಪಿದೆ ಎಂದು ವರ್ಲ್ಡೋಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾದ ರಾಷ್ಟ್ರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 39,767 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 445 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದೇಶದಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 3.32 ಕೋಟಿಗೆ (3,32,30,561) ಏರಿಕೆಯಾಗಿದೆ. ಸಾವಿನ ಸಂಖ್ಯೆ 5.91 ಲಕ್ಷಕ್ಕೆ (5,91,514) ತಲುಪಿದೆ.

ಭಾರತದಲ್ಲಿ ಹೊಸದಾಗಿ 3.68 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 2 ಕೋಟಿಯ ಸಮೀಪಕ್ಕೆ ಸಾಗಿದೆ. 2.22 ಲಕ್ಷ (2,22,408) ಸೋಂಕಿತರು ಮೃತಪಟ್ಟಿದ್ದಾರೆ.

ಸೋಮವಾರ ಬ್ರೆಜಿಲ್‌ ಹಾಗೂ ಟರ್ಕಿಯಲ್ಲಿ ಕ್ರಮವಾಗಿ 36,524 ಹಾಗೂ 24,733 ಹೊಸ ಪ್ರಕರಣಗಳು ವರದಿಯಾಗಿವೆ. ಈ ಎರಡೂ ದೇಶಗಳಲ್ಲಿ ಈವರೆಗೆ ಕ್ರಮವಾಗಿ 4,08,829 ಮತ್ತು 41,191 ಸಾವಿನ ಪ್ರಕರಣಗಳು ವರದಿಯಾಗಿವೆ. ಉಳಿದಂತೆ, ಮೆಕ್ಸಿಕೋ (2.17 ಲಕ್ಷ), ಇಂಗ್ಲೆಂಡ್‌ (1.27 ಲಕ್ಷ), ಇಟಲಿ (1.21 ಲಕ್ಷ), ರಷ್ಯಾ (1.11 ಲಕ್ಷ) ಮತ್ತು ಫ್ರಾನ್ಸ್‌ನಲ್ಲಿ (1.05 ಲಕ್ಷ) ಒಂದು ಲಕ್ಷಕ್ಕಿಂತ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ.

ಅಮೆರಿಕ-ಭಾರತಲ್ಲೇ ಹೆಚ್ಚು ಸಕ್ರಿಯ ಪ್ರಕರಣಗಳು
ವರ್ಲ್ಡೋಮೀಟರ್‌ ಮಾಹಿತಿ ಪ್ರಕಾರ ಜಗತ್ತಿನದಾದ್ಯಂತ ವರದಿಯಾಗಿರುವ ಒಟ್ಟು 15.4 ಕೋಟಿ ಪ್ರಕರಣಗಳ ಪೈಕಿ, ಈವರೆಗೆ ಒಟ್ಟು 13.2 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ. 32 ಲಕ್ಷದ 26 ಸಾವಿರ ಮಂದಿ ಮೃತಪಟ್ಟಿದ್ದು, ಇನ್ನೂ 1.86 ಕೋಟಿಗೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ.

3.32 ಕೋಟಿ ಪ್ರಕರಣಗಳು ವರದಿಯಾಗಿರುವ ಅಮೆರಿದಲ್ಲಿ 2 ಕೋಟಿ 59 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಆದರೆ, ಇನ್ನೂ 67 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. 1.99 ಕೋಟಿ ಕೋಟಿ ಸೋಂಕು ಪ್ರಕರಣಗಳನ್ನು ಹೊಂದಿರುವ ಭಾರತದಲ್ಲಿ ಇನ್ನೂ 34.4 ಲಕ್ಷ ಸಕ್ರಿಯ ಪ್ರಕಣಗಳಿವೆ. ಹೀಗಾಗಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಅರ್ಧದಷ್ಟು ಈ ಎರಡೇ ದೇಶಗಳಲ್ಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು