ಭಾನುವಾರ, ನವೆಂಬರ್ 29, 2020
25 °C

Covid-19 World Update| ನಾಲ್ಕೂವರೆ ಕೋಟಿ ದಾಟಿದ ಕೊರೊನಾ ಸೋಂಕು ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅ.30ರ ಹೊತ್ತಿಗೆ ನಾಲ್ಕೂವರೆ ಕೋಟಿ (4,56,04,615) ಮೀರಿದೆ. ಸಾವಿನ ಸಂಖ್ಯೆ 1.18 ಲಕ್ಷ (11,89,610) ದಾಟಿದೆ.

ಆದರೆ, ನಾಲ್ಕೂವರೆ ಕೋಟಿ ಸೋಂಕಿತರ ಪೈಕಿ ಈಗಾಗಲೇ 3,30,88,463 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ವಿಶ್ವದಲ್ಲಿ ಸಕ್ರಿಯವಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 1,13,26,542 ಮಾತ್ರ. ಈ ಪೈಕಿ 1,12,43,905 ಮಂದಿಯ ಪರಿಸ್ಥಿತಿ ಸಾಧಾರಣವಾಗಿದ್ದರೆ, 82,637 ಮಂದಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ.

ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 92,31,014 ಸೋಂಕಿತರಿದ್ದಾರೆ. ಈ ಪೈಕಿ 59,88,200 ಗುಣಮುಖರಾಗಿದ್ದರೆ, 2,34,444 ಮಂದಿ ಮೃತಪಟ್ಟಿದ್ದಾರೆ.

ಭಾರತದಲ್ಲಿ 80,94,636 ಸೋಂಕು ಪ್ರಕರಣಗಳಿವೆ. 73,76,961ಮಂದಿ ಗುಣಮುಖರಾಗಿದ್ದಾರೆ. 1,21,211 ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ 54,99,875 ಸೋಂಕಿತರಿದ್ದಾರೆ. ಈ ಪೈಕಿ 49,54,159 ಗುಣವಾಗಿದ್ದಾರೆ. 1,59,104 ಮಂದಿ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು