ಜಾಗತಿಕ ಕೋವಿಡ್–19 ಸೋಂಕಿತರ ಸಂಖ್ಯೆಯು ಹತ್ತು ಕೋಟಿ ದಾಟಿದೆ ಎಂದು ವರ್ಲ್ಡೋಮೀಟರ್ ವೆಬ್ಸೈಟ್ ವರದಿ ಮಾಡಿದೆ.

ಜನವರಿ 26ರ ರಾತ್ರಿ 10 ಗಂಟೆಯ ವೇಳೆಗೆ ಜಾಗತಿಕವಾಗಿ 10,04, 47,781 ಪ್ರಕರಣಗಳು ದೃಢಪಟ್ಟಿವೆ ಎಂದು ವರದಿಯಾಗಿದೆ.

ವೆಬ್ಸೈಟ್ ನೀಡಿರುವ ಮಾಹಿತಿ ಪ್ರಕಾರ ಇಂದು ಬರೋಬ್ಬರಿ 1.68 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 5138 ಮಂದಿ ಮೃತಪಟ್ಟಿದ್ದು, 1.78 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಚೇತರಿಸಿಕೊಂಡವರ ಸಂಖ್ಯೆ 7.24 ಕೋಟಿ ದಾಟಿದ್ದು, ಸಾವಿನ ಸಂಖ್ಯೆ 21 ಲಕ್ಷಕ್ಕೇರಿದೆ. ಇನ್ನೂ 2 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

ಅತಿಹೆಚ್ಚು (2.55 ಕೋಟಿ) ಪ್ರಕರಣಗಳು ವರದಿಯಾಗಿರುವ ಅಮೆರಿದಲ್ಲಿ ಈವರೆಗೆ 1.56 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 4.27 ಲಕ್ಷಕ್ಕೇರಿದೆ. ಇನ್ನೂ 98 ಲಕ್ಷ ಸಕ್ರಿಯ ಪ್ರಕರಣಗಳು ಇವೆ.ಭಾರತದಲ್ಲಿ 1.06 ಕೋಟಿ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 1.03 ಕೋಟಿ ಜನರು ಗುಣಮುಖರಾಗಿದ್ದಾರೆ. 1.53 ಲಕ್ಷ ಸೋಂಕಿತರು ಮೃತಪಟ್ಟಿದ್ದರೆ, ಇನ್ನೂ 1.79 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಉಳಿದಂತೆ ಫ್ರಾನ್ಸ್ನಲ್ಲಿ 27 ಲಕ್ಷ, ಇಂಗ್ಲೆಂಡ್ನಲ್ಲಿ 19 ಲಕ್ಷ, ಬ್ರೆಜಿಲ್ನಲ್ಲಿ 9 ಲಕ್ಷ, ಅಮೆರಿಕದಲ್ಲಿ 98 ಲಕ್ಷ ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಈ ಸಂಖ್ಯೆ 1.79 ಲಕ್ಷ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.